ಸಾರ್ಥಕ ಸಮಾವೇಶಕ್ಕೆ ೧೭ ಬಸ್ ವ್ಯವಸ್ಥೆ – ನಾಗರತ್ನ

ಸಿರವಾರ.ಮಾ.೧೪- ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಯ ಸಾಧನ (ಸಾರ್ಥಕ) ಸಮಾವೇಶಕ್ಕೆ ಮಹಿಳಾ ಮತ್ತು ಮಕ್ಕಳ, ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ೮ ಬಸ್ ವ್ಯವಸ್ಥೆ ಮಾಡಲಾಗಿದ್ದೂ, ಮಹಿಳೆಯರನ್ನು, ಸ್ವ-ಸಹಾಯ ಗುಂಪುಗಳ ಸದಸ್ಯರನ್ನು ಈ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮದ ಉಪದೇಶವನ್ನು ತಿಳಿಸುವ ಕಾರ್ಯ ಮಾಡಲಾಗಿದೆ ಎಂದು ಸಿರವಾರ ಸಿಡಿಪಿಓ ನಾಗರತ್ನ ನಾಯಕ ಹೇಳಿದರು.
ಪ. ಪಂಚಾಯತಿ ಹಳೆ ಕಟ್ಟಡದ ಮುಂದೆ ಕಾರ್ಯಕ್ರಮಕ್ಕೆ ತೆರಳಲು ಬಸ್ ಚಾಲನೆ ನೀಡಿ, ಮಾತನಾಡಿದ ಅವರು ಪ್ರತಿ ಗ್ರಾ.ಪಂ. ಗೆ ಒಂದು ಬಸ್, ಸಿರವಾರ ಪಟ್ಡಣಕ್ಕೆ ೨ ಬಸ್, ಕವಿತಾಳ ಪಟ್ಟಣ ೧ ಬಸ್, ಮಾಡಗಿರಿ ಪಂಚಾಯತ್ ೩ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ, ಮೇಲ್ವಿಚಾರಕಿ ನಾಗಮ್ಮ ಎನ್.ಹೊಸೂರು. ಅಂಗನವಾಡಿ ಕಾರ್ಯಕರ್ತೆಯ, ಮಹಿಳೆಯರು ಇದ್ದರು.