ಸಾರ್ಥಕತೆಗೆ ಸತ್ಕಾರ್ಯಗಳೇ ಮೂಲ: ಶಾಂತವೀರ ಶಿವಾಚಾರ್ಯರು

ಮಾದನಹಿಪ್ಪರಗಿ:ಮಾ.13: ಜೀವ ಸಂಕುಲದಲ್ಲಿ ಮಾನವ ಶ್ರೇಷ್ಠನೆನಿಸಿಕೊಂಡಿದ್ದಾನೆ. ಅರಿವೇ ಗುರುವಾಗಿ ಸನ್ಮಾರ್ಗದಲ್ಲಿ ನಡೆದು ಬದುಕನ್ನು ಹಸನು ಮಾಡಿಕೊಂಡಿದ್ದಾನೆ. ಸಂಸ್ಕಾರವೇ ತಳಹದಿಯಾಗಿರುವಾಗ ಸಾರ್ಥಕ ಬದುಕಿಗೆ ಸತ್ಕಾರ್ಯಗಳೆ ಮೂಲಕಾರಣಗಳಾಗಿವೆ ಎಂದು ಚಲಗೇರಾ ರೇಣುಕಾ ಪರ್ಣಕುಟೀರದ ಶಾಂತವೀರ ಶಿವಾಚಾರ್ಯರು ಹೇಳಿದರು.
ಇಂದು ಚಲಗೇರಾ ಗ್ರಾಮದಲ್ಲಿ ಯುಗಮಾನೋತ್ಸವ2024 ನಿಮಿತ್ಯವಾಗಿ ಶಾಂತವೀರ ಶಿವಾಚಾರ್ಯರ ಪಲ್ಲಕ್ಕಿ ಮಹೋತ್ಸವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಮಾನವ ತನ್ನ ಸುತ್ತಲಿನ ಸ್ವಾರ್ಥ ಸಮಾಜದಿಂದ ಅಲ್ಪ ಮಾನವನಾಗಿ ಬದುಕು ಸಾಗಿಸುತ್ತಿದ್ದಾನೆ. ಧರ್ಮ ಗುರುಗಳ ಮಾರ್ಗದರ್ಶನ ಆತನನ್ನು ಉತ್ತಮ ಸಂಸ್ಕಾರವಂತನಾಗಲು ಸಾಧ್ಯ. ಈ ಭೂಮಿಯ ಮೇಲೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಸಮಾನತೆ ಸಹಬಾಳ್ವೆ ಎಲ್ಲರ ಉಸಿರಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಆಳಂದ ಎಸ್‍ಕೆಡಿಆರ್‍ಡಿಪಿ ಟ್ರಸ್ಟಿನ ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಕಿ ಮಾತನಾಡಿ ಈ ನಾಡಿನಲ್ಲಿ ಅನೇಕ ಮಠಾಧೀಶರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಧರ್ಮಸ್ಥಳ ಸೇವಾ ಸಂಸ್ಥೆಯ ಅನೇಕ ಯೋಜನೆಗಳು ನಿರ್ಗತಿಕರ ಬಾಳಿಗೆ ಆಸರೆಯಾಗಿವೆ. ಅದೇ ರೀತಿಯಾಗಿ ಚಲಗೇರಾ ರೇಣುಕಾ ಪರ್ಣಕುಟೀರ ಪಟ್ಟಾಧ್ಯಕ್ಷರಾದ ಶಾಂತವೀರ ಶಿವಾಚಾರ್ಯರು ಧರ್ಮ ಸಂರಕ್ಷಣೆ ಹಿಂದು ಸಂಸ್ಕøತಿ ನಾಗರೀಕತೆಗೆ ಒತ್ತು ಕೊಟ್ಟು ಮಠದಲ್ಲಿ ವೇದ ಶಾಸ್ತ್ರ ಪುರಾಣಗಳುನ್ನು ಮತ್ತೆ ಮುನ್ನಲೆಗೆ ತರುವ ಕಾಯಕದಲ್ಲಿ ತೊಡಿಗಿದ್ದು ಶ್ಲಾಘನೀಯ ಎಂದು ಹೇಳಿದರು. ಪುರಾಣ ಪ್ರವಚನಕಾರ ಜೇರಟಗಿಯ ಮಡಿವಾಳಯ್ಯ ಶಾಸ್ತ್ರಿಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಂಚಾಕ್ಷರಿ ದೇವರು ಐನಾಪುರ, ವೀರ ಸೋಮೇಶ್ವರ ದೇವರು ಸರಸಂಬಾ, ಮೃತ್ಯುಂಜಯ ಸ್ವಾಮಿಗಳು ಮೈಂದರಗಿ, ಮರಳಸಿದ್ದ ಸ್ವಾಮಿಗಳು ಪಡಸಾವಳಿ ಉಪಸ್ಥಿತರಿದ್ದರು. ಸಂಜೆ 5 ಗಂಟೆಗೆ ಶಾಂತವೀರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮೆರವಣಿಗೆ ಚಲಗೇರಾ ಗ್ರಾಮದ ಬೀದಿಗಳಲ್ಲ ಸಾಗಿ ನಂತರ ಪರ್ಣಕುಟೀರಕ್ಕೆ ತಲುಪಿತು. ಅಡವಯ್ಯ ಸ್ವಾಮಿ, ಶಿವಾನಂದ ಹಜಾರೆ, ಗುಂಡೇರಾನ ದಿಂಡೂರೆ, ಶಿವಾನಂದ ದಿಂಡೂರೆ, ಬಸವರಾಜ ಬಿರದಾರ, ವಿಶ್ವನಾಥ ಪರೇಣಿ, ಸಾಯಬಣ್ಣ ಹಣಮಶೆಟ್ಟಿ, ಸಿದ್ದರಾಢ ಜಂಬಾರ, ನಿರ್ಮಲಾ ಮುಲಗೆ, ಶಶಿಕಲಾ ಜೇವರಗಿ, ಬೌರಮ್ಮ ದುತ್ತರಗಿ, ಮಹಾನಂದ ಹನಮಸೆಟ್ಟಿ, ಶಿವಲಿಂಗಪ್ಪ ಮೈಂದರಗಿ ಶರಣಪ್ಪ ಹಣಮೆಸೆಟ್ಟಿ, ಪಂಚಯ್ಯ ಸ್ವಾಮಿ ಇದ್ದರು.