
ಕೋಲಾರ,ಮೇ,೨೨:ನಗರದ ಹೊರವಲಯದ ಕಾಲೇಜುಗಳಲ್ಲಿ ಸಿ.ಇ.ಟಿ. ಕೇಂದ್ರವನ್ನಾಗಿ ಮಾಡಿರುವ ಹಿನ್ನಲೆಯಲ್ಲಿ ಪರೀಕ್ಷಾರ್ಥಿಗಳಿಗೆ ಸಮರ್ಪಕವಾದ ಬಸ್ ಸೌಲಭ್ಯಗಳಿಲ್ಲದೆ ಪರಿದಾಡುವಂತಾಗಿತ್ತು ಎಂಬುವುದು ಪರೀಕ್ಷಾರ್ಥಿ ವಿದ್ಯಾರ್ಥಿಗಳ ಪೋಷಕರ ಆರೋಪವಾಗಿದೆ.
ನಗರದ ಹೊರವಲಯದಲ್ಲಿನ ಸಹ್ಯಾದ್ರಿ ಕಾಲೇಜು ಹಾಗೂ ಎಕ್ಸೆಲೆಂಟ್ ಕಾಲೇಜುಗಳನ್ನು ಸಿ.ಇ.ಟಿ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿತ್ತು. ಅದರೆ ಈ ಕಾಲೇಜಿಗೆ ಸಮರ್ಪಕವಾದ ಬಸ್ ವ್ಯವಸ್ಥೆಗಳಿಲ್ಲದೆ ಪರೀಕ್ಷಾರ್ಥಿಗಳು ನಿಗಧಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತೆರಳು ಪರದಾಡ ಬೇಕಾಯಿತು,
ಗ್ರಾಮೀಣಾ ಭಾಗದ ವಿಧ್ಯಾರ್ಥಿಗಳು ಬಸ್ ನಿಲ್ದಾಣದಿಂದ ಈ ಪರೀಕ್ಷಾ ಕೇಂದ್ರಗಳ ಅಂತರ ಸುಮಾರು ೫ ಕಿ.ಮಿ. ಹೆಚ್ಚು ಇರುವುದರಿಂದ ಆಟೋಗಳವರು ಅಪ್ ಅಂಡ್ ಡೌನ್ ಎರಡು ನೀಡ ಬೇಕೆಂದು ರೂ ೧೦೦ ಕೇಳುತ್ತಾರೆ. ಓರ್ವ ವಿದ್ಯಾರ್ಥಿ ಕಾಲೇಜಿಗೆ ಹೋಗಿ ಪರೀಕ್ಷೆ ಬರೆದು ಬರಲು ಸುಮಾರು ೨೦೦ ರೂ ವೆಚ್ಚವನ್ನು ಭರಿಸ ಬೇಕಾಗುತ್ತದೆ. ಅಲ್ಲದೆ ವಿಳಾಸವನ್ನು ಪತ್ತೆ ಹಚ್ಚುವುದೇ ದೊಟ್ಟ ತಲೆನೋವು ಅಗಿ ಪರಿಣಮಿಸುತ್ತದೆ.
ಸಮರ್ಪಕವಾದ ಸಾರಿಗೆ ಸೌಲಭ್ಯಗಳಿಲ್ಲದ ಕಾಲೇಜುಗಳನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿರುವುದು ತೀರ ಅವೈಜ್ಞಾನಿಕವಾಗಿದೆ. ಕನಿಷ್ಟ ಪ್ರಜ್ಞೆಯೂ ಇಲ್ಲದ ಶಿಕ್ಷಣಾಧಿಕಾರಿಗಳಿಂದ ವಿದ್ಯಾರ್ಥಿಗಳು ಶಿಕ್ಷೆಯ ಜೂತೆಗೆ, ಮಾನಸಿಕವಾಗಿ ಒತ್ತಡ ಹಾಗೂ ಹಣವು ಸಹ ವ್ಯಾರ್ಥವಾಯಿತು ಎಂಬ ಅರೋಪಗಳು ಕೇಳಿ ಬಂದಿದ್ದು ಇಂಥ ಅವ್ಯವ್ಯಸ್ಥೆಗೆ ಕಾರಣರಾದ ಶಿಕ್ಷಣಾಧಿಕಾರಿಗಳಿಗೆ ಸಿ.ಇ.ಟಿ. ವಿದ್ಯಾರ್ಥಿಗಳ ಪೋಷಕರು ಹಿಡಿ ಶಾಪಹಾಕುತ್ತಿದ್ದದ್ದು ಪರೀಕ್ಷಾ ಕೇಂದ್ರದ ಕೇಳಿ ಬರುತ್ತಿತ್ತು,