ಸಾರಿಗೆ ಸೌಲಭ್ಯ ಕಲ್ಪಿಸಲು ಒತ್ತಾಯ

ಮುದಗಲ್.ಜ.೧೪-ಪಟ್ಟಣದಿಂದ ಅಂಕಲಿಮಠ ಮುದೇನೂರು ಮಾರ್ಗ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಲಿಂಗಸೂಗೂರು ಡಿಪೋ ಮ್ಯಾನೇಜರಗೆ ಮನವಿ ಪತ್ರ ಸಲ್ಲಿಸಿದರು.
ಸರಕಾರ ಕಾಲೇಜ್ ಪ್ರಾರಂಭ ಮಾಡಿದೆ ಆದರೆ ಸರಿಯಾದ ಸಮಯಕ್ಕೆ ಸಾರಿಗೆ ಸೌಲಭ್ಯ ಇಲ್ಲದೆ ವಿದ್ಯಾರ್ಥಿಗಳ ಅಭ್ಯಾಸ ಕುಂಠಿತವಾಗಿದೆ ಬೆಳಗ್ಗೆ ೬ಘಂಟೆಗೆ ಬಸ್ಸು ಸೌಲಭ್ಯ ಇಲ್ಲದೆ ತಮ್ಮ ವಾಹನದ ಮೂಲಕ ಕಾಲೇಜ್ ಬರಬೇಕಾಗಿದೆ ಪರಸ್ಥಿತಿ ನಿರ್ಮಾಣವಾಗಿದೆ.
ಈ ಕೂಡಲೆ ಸಾರಿಗೆ ಇಲಾಖೆ ಅಧಿಕಾರಿಗಳು ಮುದೇನೂರು ದಿಂದ ಬೆಳಗ್ಗೆ ೬ಘಂಟೆಗೆ ಮತ್ತು ಮುದಗಲ್‌ದಿಂದ ಮಧ್ಯಾಹ್ನ ೨ಘಂಟೆಗೆ ಸಾರಿಗೆ ಸೌಲಭ್ಯ
ಕಲ್ಪಿಸಿ ಕಾಲೇಜ್ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಂಡಬೇಕು ಎಂದು ವಿದ್ಯಾರ್ಥಿಗಳು ಲಿಂಗಸೂಗೂರು ಡಿಪೋ ಮ್ಯಾನೇಜರಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಮೈಹಿಬೂಬ ನಧಾಪ್, ಪ್ರವೀಣಕುಮಾರ ಬಾವಿಕಟ್ಟಿ, ವಿಜಯಕುಮಾರ ಸೇರಿದಂತೆ ಕಾಲೇಜ್ ವಿದ್ಯಾರ್ಥಿಗಳು ಇದ್ದರು.