ಸಾರಿಗೆ ಸಚಿವರ ತವರೂರುನಲ್ಲಿ ಬಗೆಹರಿಯದ ಬಸ್ ಸಮಸ್ಯೆ

(ಸಂಜೆವಾಣಿ ವಾರ್ತೆ)
 ಕಂಪ್ಲಿ ಡಿ 06  :ತಾಲೂಕಿನ ಕಂಪ್ಲಿ, ದೇವಸಮುದ್ರ, ಮೆಟ್ರಿ, ದೇವಲಾಪುರ, ಜವುಕು, ಜೀರಿಗನೂರು, ನಂ 15 ಗೋನಾಳು, ಸುಗ್ಗೇನಹಳ್ಳಿ, ಮಾವಿನಹಳ್ಳಿ, ಹೊನ್ನಳ್ಳಿ. ಸಂಡೂರು ತಾಲೂಕಿನ ಹಳೆ ದರೋಜಿ, ಹೊಸ ದರೋಜಿ, ಮಾದಾಪುರ,ತಿಮ್ಮಲಾಪುರ ಇಲ್ಲಿ ದಿನ ನಿತ್ಯ ಬಸ್ಸುಗಳಿಗಾಗಿ ಹೋರಾಟ ಮಾಡಿದರು ಶಾಲಾ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆ ಬಗೆಗರಿದಿಲ್ಲ.
ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ  ಪಾಸ್ ನಡೆಸಿವುದಿಲ್ಲ. ಮಂತ್ರಾಲಯ, ಅನಂತಪುರ, ಬೆಂಗಳೂರು, ಅಂತರ ರಾಜ್ಯ ಈ ಬಸ್ ಗಳು ನಿಲುಗಡೆ  ಮಾಡುವುದಿಲ್ಲ. ಈ ಎಲ್ಲಾ ಬಸ್ ಗಳು ನಿಲುಗಡೆ ಮಾಡಬೇಕು ವಿದ್ಯಾರ್ಥಿಗಳು ಕಾಲೇಜಿಗೆ ಅನುಕೂಲ ಮಾಡಬೇಕು.
ಬೆಳಿಗ್ಗೆ ಇಷ್ಟಾದರೆ ಸಂಜೆ 3 ಗಂಟೆಯಿಂದ 7 ಗಂಟೆಯವರೆಗೆ ಬಸ್ ಬರುವುದಿಲ್ಲ ಬಳ್ಳಾರಿ ರಾಯಲ್ ಸರ್ಕಲ್ ಬಳಿ ಸ್ಟ್ರೈಕ್ ಮಾಡಿದರೆ ಸಾರಿಗೆ ಸಚಿವರು ಬಳಿ ಮನವಿ ಮಾಡಿದರು,  ಬಗೆಹರಿಯದ ಸಮಸ್ಯೆ. ಎಷ್ಟೇ ಬಾರೀ ಬಸ್ ನಿಲ್ಲಿಸಿ ಪ್ರತಿಭಟನೆ ಮಾಡಿದರು ವಿದ್ಯಾರ್ಥಿಗಳು ಕಾಲೇಜಿಗೆ ಸರಿಯಾದ ಸಮಯಕ್ಕೆ ತೆರಳಲು ಆಗುತ್ತಿಲ್ಲ.ಇತ್ತ ಸರಿಯಾದ ಸಮಯಕ್ಕೆ ಮನೆಗೆ ತೆರಳಲು ಆಗುತ್ತಿಲ್ಲ, ವಿದ್ಯಾರ್ಥಿಗಳು (ಓದಲು,ಬರೆಯಲು)ಗೃಹಕೆಲಸ ಮಾಡಲು ಆಗುತ್ತಿಲ್ಲ,ಸಚಿವರು ಇತ್ತ ಗಮನಹರಿಸಿ ವಿದ್ಯಾರ್ಥಿಗಳು ಸಮಸ್ಯೆ ಪರಿಹಾರ ಆಗಬೇಕು ಎಂದು ವಿದ್ಯಾರ್ಥಿಗಳು ಇಂದು ಸಹ ಬಸ್ ತಡೆದು ಪ್ರತಿಭಟನೆ ಮಾಡಿ ಮನವಿ ಮಾಡಿದರು‌