ಸಾರಿಗೆ ಸಚಿವರ ತವರಲ್ಲಿ ತಳ್ಳುವ ಬಸ್

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.14: ತಳ್ಳೋ ಮಾಡೆಲ್ ಬಸ್ ಇದು. ಇದು ಕಂಡು ಬಂದಿದ್ದು  ಸಾರಿಗೆ ಸಚಿವ ಶ್ರೀರಾಮುಲು ಅವರ ತವರು ಬಳ್ಳಾರಿ ನಗರದಲ್ಲಿ.
ದಶಕಗಳೇ ಕಳೆದ್ರೂ, ಲಕ್ಷಾಂತರ ಕಿಲೋ ಮೀಟರ್ ಓಡಿ,  ಗುಜರಿಗೆ ಹಾಕಬೇಕಾದ  ಬಸ್ ಬದಲಾಯಿಸದೇ ಓಡಾಟ ಮಾಡ್ತಿರೋ ಕಾರಣ  ಎಲ್ಲಂದ್ರಲ್ಲಿ ಬಸ್ ಗಳು ನಿಂತು ಬಸ್ ನಲ್ಲಿ  ಪ್ರಯಾಣಿಸುವ ಒ್ರಯಾಣಿಕರೇ ತಳ್ಳಿಕೊಂಡು ಹೋಗುವ  ಪರಿಸ್ಥಿಗೆ ಬಂದಿವೆ.
ಒಂದು ಕಡೆ ರಾಜಧಾನಿ ಬೆಂಗಳೂರಿನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿ ಮಾಡಿ ಇತ್ತೀಚೆಗೆ ಸಚಿವರು ಅವನ್ನು ಜನಸೇವೆಗೆ ಸಮರ್ಪಿಸಿದರು.
ಆದರೆ ಜಿಲ್ಲಾ, ತಾಲೂಕು ಪ್ರದೇಶಗಳಿಂದ ಗ್ರಾಮೀಣ ಪ್ರದೇಶಕ್ಕೆ ಕಳಿಸುವ ಬಸ್ ಗಳ‌ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಸಾರಿಗೆ ನಿಗಮಗಳ ನಷ್ಟದ ನೆವದಲ್ಲಿ ತಳ್ಳುವಂತಹ ಬಸ್ ಗಳನ್ನೇ ಓಡಿಸಲಾಗುತ್ತಿದೆ.
ಬಳ್ಳಾರಿ ನಗರದ  ದುರ್ಗಮ್ಮ ದೇಗುಲದ  ರೈಲ್ವೇ ಅಂಡರ್ ಬ್ರಿಡ್ಜ್ ನಲ್ಲಿ  ಮೋಕ ಮತ್ತು ಬೆಣಕಲ್ಲು ಗ್ರಾಮಕ್ಕೆ ಹೊಗುವ ಬಸ್ಸು ಸೇತುವೆ ಮಧ್ಯಭಾಗದ ವರೆಗೆ ಬಂದು  ನಿಂತು ಬಿಟ್ಟಿದೆ.
ಎಷ್ಟೇ ಪ್ರಯತ್ನ ಪಟ್ಟರೂ ಸ್ಟಾರ್ಟ್ಅಗಲಿಲ್ಲ.  ಬಸ್ ನಿಂತಿದ್ದರಿಂದ  ಟ್ರಾಫಿಕ್ ಜಾಮ್ ಹೆಚ್ಚಾಗತೊಡಗಿದೆ. ಕೊನೆಗೆ  ಬಸ್ಸಿನಲ್ಲಿ ಇರೋ ಪ್ರಯಾಣಿಕರು, ಸಂಚಾರಿ ಪೋಲಿಸರು, ಸಾರ್ವಜನಿಕರು ಬಸ್ ತಳ್ಳಿ ಸೇತುವೆ ಮೇಲಕ್ಕೆ ಕಳಿಸಿದ್ದಾರೆ.
ಸಚಿವರ ತವರಲ್ಲಿನ ಬಸ್ ಗಳ ಪರಿಸ್ಥಿತಿಯೇ ಹೀಗಿರುವಾಗ ಇನ್ನಿತರ ಕಡೆಗಳಲ್ಲಿನ ಪರಿಸ್ಥಿತಿ ಹೇಗಿದೆಯೋ ಆ ದೇವರೆ ಬಲ್ಲ.