ಸಾರಿಗೆ ಸಂಸ್ಥೆಯಿಂದ ಆಕ್ಸಿಜನ್ ಸಹಿತ ಆಂಬ್ಯುಲೆನ್ಸ್

ಕಲಬುರಗಿ:ಮೇ.18: ಆಕ್ಸಿಜನ್ ವ್ಯವಸ್ಥೆ ಇರುವ ಆಂಬ್ಯುಲೆನ್ಸ್ ಅನ್ನು ಈಶಾನ್ಯ
ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಲೂರ
ಅವರು ಸಚಿವರ ಮೂಲಕ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಕಲಬುರಗಿ ಕೊರೊನಾ ತುರ್ತು ಸ್ಥಿತಿಯಲ್ಲಿ ಸೋಂಕಿತರು ಮತ್ತು ರೋಗಿಗಳನ್ನು
ಆಸ್ಪತ್ರೆಗೆ ಸಾಗಿಸಲು ನೆರವಾಗಲು ಆಕ್ಸಿಜನ್ ವ್ಯವಸ್ಥೆ ಇರುವ ಆಂಬ್ಯುಲೆನ್ಸ್ ಅನ್ನು
ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ವತಿಯಿಂದ ಜಿಲ್ಲಾಡಳಿತಕ್ಕೆ
ನೀಡಲಾಗಿದೆ. ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ
ಸೋಮವಾರ ಸಂಜೆ ಸರಳವಾಗಿ ಜರುಗಿದ ಕಾರ್ಯಕ್ರಮದಲ್ಲಿ ಆಂಬ್ಯುಲೆನ್ಸ್
ವಾಹನದ ಕೀಯನ್ನು ಎನ್‌ಇಕೆಆರ್‌ಟಿಸಿ ಅಧ್ಯಕ್ಷರಾಗಿರುವ ಶಾಸಕ ರಾಜಕುಮಾರ
ಪಾಟೀಲ್ ತೇಲ್ಲೂರ
ಅವರು ಸಚಿವ ಮುರುಗೇಶ ಆರ್. ನಿರಾಣಿ ಅವರಿಗೆ
ಹಸ್ತಾಂತರಿಸಿದರು.
ತೇಲ್ಕೂರ ಮಾತನಾಡಿ, ಇನ್ನೂ ಬೇಡಿಕೆ ಸಲ್ಲಿಸಿದರೆ ಇನ್ನಷ್ಟು ವಾಹನ, ಸಿಬ್ಬಂದಿ
ಸೇವೆ ಹೀಗೆ ಎಲ್ಲ ಸಹಕಾರ ನೀಡಲು ಸಿದ್ದ ತೋರಣಗಲ್ನಿಂದ ಆಕ್ಸಿಜನ್
ಸಾಗಣೆ ಮಾಡಲು ಟ್ಯಾಂಕರ್‌ಗಳಿಗೆ ಸಂಸ್ಥೆಯ 17 ಜನ ಚಾಲಕರನ್ನು ನಿಯೋಜನೆ
ಮಾಡಲಾಗಿದೆ. ಜಿಲ್ಲೆಯಲ್ಲಿ ಸಹ 10 ಜನ ಚಾಲಕರನ್ನು ಸರ್ಕಾರದ ವಿವಿಧ
ಇಲಾಖೆಗಳಿಗೆ ಸೇವೆಗೆ ಕಳುಹಿಸಲಾಗಿದೆ ಎಂದರು.
ಆಕ್ಸಿಜನ್ ಸವಲತ್ತು ಹೊಂದಿರುವ ಬಸ್‌ಗಳನ್ನು ನಿರ್ಮಾಣ ಮಾಡಲು
ಮುಂದಾಗುವ ಎನ್‌ಜಿಒಗಳಿಗೆ ಈಶಾನ್ಯ ಸಾರಿಗೆ ಸಂಸ್ಥೆಯಿಂದ ಉಚಿತವಾಗಿ ಬಸ್
ನೀಡುತ್ತೇವೆ. ಅವರು ಅದಕ್ಕೆ ಆಕ್ಸಿಜನ್ ಅಳವಡಿಸಿಕೊಂಡು ಬಳಕೆ ಮಾಡಬಹುದು.
ಬಸ್‌ಗೆ ಇಂಧನ ಭರ್ತಿ ಮಾಡುವುದು,ಡೈವರ್ ಸೇವೆಯನ್ನು ಸಂಸ್ಥೆ ಭರಿಸಲಿದೆ.
ಸೇವಾ ಸಂಸ್ಥೆಯವರು ಆಕ್ಸಿಜನ್ ಅಳವಡಿಸುವ ತಾಂತ್ರಿಕತೆ ಮತ್ತು ಅದನ್ನು ಆಪ್
ರೇಟ್ ಮಾಡುವರು ಇಟ್ಟುಕೊಂಡರೆ ಸಾಕು ಎಂದು ಸೇಡಂ ಶಾಸಕ ರಾಜಕುಮಾರ
ತೇಲೂರ ವಿವರಣೆ ನೀಡಿದರು.
ಕಲಬುರಗಿ ಜಿಲ್ಲೆಯಲ್ಲಿ ಕರೊನಾ ನಿರ್ವಹಣೆಗೆ ಜಿಲ್ಲಾಡಳಿತಕ್ಕೆ ಬೇಕಾಗುವ
ಎಲ್ಲ ಸಹಾಯ ಮತ್ತು ಸಹಕಾರವನ್ನು ಈಶಾನ್ಯ ಸಾರಿಗೆ ಸಂಸ್ಥೆ ನೀಡಲಿದೆ. ಅಲ್ಲದೆ
ಜಿಲ್ಲಾಡಳಿತವು ಚಾಲಕರು, ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಯಾವುದೇ ತೆರನಾದ
ಮಾನವ ಶಕ್ತಿ ಇತ್ಯಾದಿ ನೀಡಲು ಸಿದ್ದವಾಗಿದ್ದೇವೆ ಎಂದು ಸಚಿವ ನಿರಾಣಿ ಅವರ
ಗಮನಕ್ಕೆ ತೇಲ್ಕೂರ ತಂದರು. ಆಂಬ್ಯುಲೆನ್ಸ್ ಕೀ ಸ್ವೀಕರಿಸಿದ ಸಚಿವರು, ತೇಲ್ಲೂರ
ಅವರು ಮಾದರಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರಲ್ಲದೇ ಇದೇ ತೆರನಾಗಿ
ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಲು ಮುಂದೆ ಬರಬೇಕೆಂದರು.
ಸಂಸದ ಡಾ| ಉಮೇಶ ಜಾಧವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್
ರೇವೂರ, ಶಾಸಕರಾದ ಬಿ.ಜಿ.ಪಾಟೀಲ್, ಶಶೀಲ್ ನಮೋಶಿ,
ಮತ್ತಿಮೂಡ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ
ತಳವಾರ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್, ಈಶಾನ್ಯ ಸಾರಿಗೆ ಸಂಸ್ಥೆಯ
ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾ
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಇತರರಿದ್ದರು.