ಸಾರಿಗೆ ಸಂಚಾರ ಕಲ್ಪಿಸಿ ಕರವೇ ಆಗ್ರಹ

ಔರಾದ : ಜ.12:ತಾಲೂಕಿನ ವಿವಿಧ ಗ್ರಾಮಗಳ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲು ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಕರವೇ ಗೌರವಾಧ್ಯಕ್ಷ ಬಸವರಾಜ ಶೆಟಕಾರ ಅವರು ಮಾತನಾಡಿ ತಾಲೂಕಿನಲ್ಲಿ ಬಸ್ ಸಂಚಾರದ ವ್ಯವಸ್ಥೆ ಕುಂಠಿತವಾಗಿದ್ದು ತಾಲೂಕಿನ ಹಲವಾರು ಹಳ್ಳಿಗಳಿಂದ ಶಾಲಾ ಮಕ್ಕಳು ದಿನನಿತ್ಯ ತಮ್ಮ ವಿದ್ಯಾಭ್ಯಾಸಕ್ಕಾಗಿ ಔರಾದ ಪಟ್ಟಣಕ್ಕೆ ಆಗಮಿಸುತ್ತಾರೆ, ಆದರೆ ಬೆಳಿಗ್ಗೆ ಸಮಯದಲ್ಲಿ ವಿದ್ಯಾರ್ಥಿಗಳು ಸಾರಿಗೆ ಬಸ್ ಸಂಚಾರ ಇಲ್ಲದೆ ಶಿಕ್ಷಣದಿಂದ ವಂಚಿತರಾಗುತಿದ್ದಾರೆ, ನಮ್ಮ ಮಕ್ಕಳಿಗೆ ಬಸ್ ನಿಲ್ದಾಣದ ನಿರ್ವಾಹಕರು ಹೆಣ್ಣುಮಕ್ಕಳನ್ನು, ವೃದ್ಧರನ್ನು, ಮಕ್ಕಳನ್ನು ಅವಾಚ್ಯವಾಗಿ ನಿಂದಿಸುತ್ತಾರೆ, ಅಂತವರನ್ನು ಕೂಡಲೇ ವಜಾಗೊಳಿಸಬೇಕು,
ಬಸ್ ಡಿಪು ಮ್ಯಾನೇಜರ್ ಅವರ ದುರ್ವರ್ತನೆ ದುರಾಡಳಿತ ನಿಲ್ಲಬೇಕು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ನೀಡಬೇಕು. ವಿದ್ಯಾರ್ಥಿಗಳ ಪರೀಕ್ಷಾ ಹತ್ತಿರ ಬರುತ್ತಿವೆ, ತಾಲ್ಲೂಕಿನಾದ್ಯಂತ ಸಾರಿಗೆ ಸಂಪರ್ಕ ಕಲ್ಪಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಮುಕ್ತಿ ಹಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ಔರಾದ ತಹಸೀಲ್ದಾರ ಅವರಿಗೆ ಮನವಿ ನೀಡಿ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರವೇ (ಪ್ರವೀಣಶೆಟ್ಟಿ ಬಣ) ಅಧ್ಯಕ್ಷ ಅನಿಲ ದೇವಕತೆ, ಅಂಬಾದಾಸ ಉಪ್ಪಾರ, ನರಸಿಂಗ ಹಕ್ಕೆ, ಯಾಕುಬ ಕಾಂಬಳೆ, ನವೀನ ರೆಡ್ಡಿ, ನವಿನಕುಮಾರ, ಸುನೀಲ, ಸಚೀನ, ಮಲ್ಲಪ್ಪ, ಯೋಗೆಶ, ನಾಗಗೋಂಡ, ಸೇರಿದಂತೆ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.