ಸಾರಿಗೆ ಮುಷ್ಕರ:7 ಬಂಧನ,55 ವಜಾ

ಕಲಬುರಗಿ ಏ 17: ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 52 ಜನರ ವಿರುದ್ಧ 22 ಪ್ರಕರಣ ದಾಖಲಿಸಲಾಗಿದೆ.ಇವರಲ್ಲಿ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ ಕೂರ್ಮಾರಾವ್ ತಿಳಿಸಿದ್ದಾರೆ.
ಬಂಧಿತ ಏಳೂ ಜನರ ವಿರುದ್ಧ ವಾಹನ ಹಾಳು ಮಾಡಿದ ಪ್ರಕರಣ ದಾಖಲಿಸಲಾಗಿದೆ.ಒಬ್ಬರು ತಲೆಮರೆಸಿಕೊಂಡಿದ್ದಾರೆ.
ಕರ್ತವ್ಯಕ್ಕೆ ಅಡ್ಡಿ ಪಡಿಸಿದ 36 ಮಂದಿ,ಕೆಸ್ಮಾ ಕಾಯಿದೆ ಅಡಿ 7 ಜನ, ವಾಟ್ಸ್‍ಪ್ ಮೂಲಕ ಪ್ರಚೋದನೆ ನೀಡಿದ ಒಬ್ಬರ ವಿರುದ್ಧ ವಿವಿಧ ಠಾಣೆಗಳಲ್ಲಿ ಎಫ್‍ಐಆರ್ ದಾಖಲಾಗಿದೆ.
ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡುವ ಉದ್ದೇಶದಿಂದ 135 ಸಿಬ್ಬಂದಿಯನ್ನು ಬೇರೆ ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ.ಸಂಸ್ಥೆ ವ್ಯಾಪ್ತಿಗೆ ಬರುವ 9 ವಿಭಾಗಗಗಳು ಸೇರಿದಂತೆ ಇಲ್ಲಿಯತನಕ 55 ಮಂದಿಯನ್ನು ವಜಾ ಮಾಡಲಾಗಿದೆ.
ಶುಕ್ರವಾರ ಹಲವಾರು ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದು 1014 ಬಸ್ ಓಡಿಸಲಾಗಿದೆ.323 ಖಾಸಗಿ ವಾಹನ,179 ಪಕ್ಕದ ರಾಜ್ಯದ ಸರಕಾರಿ ಬಸ್‍ಗಳು ಹಾಗೂ 2094 ಇತರ ವಾಹನಗಳನ್ನು ಓಡಿಸಲಾಗುತ್ತಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ ಕೂರ್ಮಾರಾವ್
ಅವರು ತಿಳಿಸಿದ್ದಾರೆ