ಸಾರಿಗೆ ಮುಷ್ಕರಕ್ಕೆ ಅಂತ್ಯ : ಆರಂಭವಾದ ಸಂಚಾರ

ಹೊಸಪೇಟೆ ಏ21: ಸಾರಿಗೆ ಮುಷ್ಕರ ಬಹುತೇಕ ಅಂತ್ಯವಾದಂತಾದರೂ ನ್ಯಾಯಾಲಯದ ಸ್ಪಷ್ಟ ನಿದೇಶನಕ್ಕೆ ಕಾಯುತ್ತಿರುವ ನೌಕರರ ನಡುವೆಯೆ ಹೊಸಪೇಟೆ ವಿಭಾಗದಲ್ಲಿ ಬಹುತೇಕ ಬಸ್ ಸಂಚಾರ ಆರಂಭವಾಗಿದೆ.
ರಾಜ್ಯದ ಎಲ್ಲಾ ನಿಗಮಗಳಲ್ಲಿ ಸಂಚಾರ ವ್ಯತ್ಯಯವಾಗಿದ್ದರೂ ಹೊಸಪೇಟೆ ವಿಭಾಗದಲ್ಲಿ ಮಾತ್ರ ರಾಜ್ಯದಲ್ಲಿಯೇ ಉತ್ತಮ ಎಂಬಂತೆ ಸಂಚಾರ ನಡೆದಿತು.
ಆದಾಗ್ಯೂ ನೌಕರರಿಗೆ ಕಿರುಕುಳು, ಬಸ್ ಸಂಚಾರಕ್ಕೆ ತೊಂದರೆ, ನೌಕರರ ಕೆಲಸಕ್ಕೆ ಅಡ್ಡಿ ಈ ಎಲ್ಲದರ ನಡುವೆ ಹೊಸಪೇಟೆ ವಿಭಾಗದ ಸಾಧನೆ ಶ್ಲಾಘನೀಯವಾಗಿದೆ. ಇಂದು ಬೆಳಿಗ್ಗೆ 8 ಗಂಟೆಗಾಗಲೇ 150ಕ್ಕೂ ಹೆಚ್ಚು ಬಸ್‍ಗಳು ಸಂಚಾರ ಆರಂಭಿಸಿದ್ದು ಸಾರ್ವಜನಿಕರು ನಿರಾಳವಾಗುತ್ತಿದ್ದಾರೆ. ಖಾಸಗಿಯವರ ದಬ್ಬಾಳಿಕೆ, ಹಣಸುಲಿಗೆ ಸೇರಿದಂತೆ ಅನಿವಾರ್ಯವಾಗಿ ಒಗ್ಗಿಹೊಗಿದ್ದ ಪ್ರಯಾಣಿಕ ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೆ ರಾಜ್ಯದ ಎಲ್ಲಾ ನಿಗಮಗಳಿಗೆ ಹೋಲಿಕೆ ಮಾಡಲಾಗಿ ರಾಜ್ಯದಲ್ಲಿಯೇ ಉತ್ತಮ ಅಂದರೆ ಸರಿಸುಮಾರು 20 ಲಕ್ಷ ಆದಾಯ ಸಂಗ್ರಹಮಾಡಿದ್ದು ಸಾಧನೆ ಸರಿ ಎನ್ನುತ್ತಾರೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ.
ಈ ಮಧ್ಯಯೂ ಮಂಗಳವಾರ ಹೊಸಪೇಟೆ ವಿಭಾಗದ ಒರ್ವ ಕಂಟ್ರೋಲರ್ ಸೇರಿದಂತೆ 8 ಜನ ಚಾಲಕ ನಿರ್ವಾಹಕರನ್ನು ಬೇರೆ ವಿಭಾಗಗಳಿಗೆ ವರ್ಗಮಾಡಲಾಗಿದೆ ಎಂದು ಸಹ ಮಾಹಿತಿ ನೀಡಿದರು.