ಸಾರಿಗೆ ಬಸ್ ಡಿಕ್ಕಿ ಸೈಕಲ್ ಸವಾರ ಸ್ಥಳದಲ್ಲೇ ಸಾವು

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ.ಮಾ.06:- ಸೈಕಲ್ ಸವಾರನಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕಾಮಗೆರೆ ಗ್ರಾಮದ ಎಬಿನೇಜರ್ ಕಾoಪ್ಲೇಂಕ್ಸ್ ಮುಂಭಾಗ ನಡೆದಿದೆ.
ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದ ಕೆ ಎ 57 ಎಫ್ 3764 ಸಂಖ್ಯೆಯ ನಾಗಮಂಗಲ ಘಟಕಕ್ಕೆ ಸೇರಿದ ವಾಹನವು ಕಾಮಗೆರೆ ಗ್ರಾಮದ ಮುಖ್ಯರಸ್ತೆಯಲ್ಲಿ ಎಬಿನೇಜರ್ ಕಾoಪ್ಲೇಂಕ್ಸ್ ಮುಂಭಾಗ ಸೈಕಲ್ ನಲ್ಲಿ ತೆರಳುತ್ತಿದ್ದ ಅದೇ ಗ್ರಾಮದ ನಿಂಗಪ್ಪ (60) ವರ್ಷದ ವ್ಯಕ್ತಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮುಂದಿನ ಚಕ್ರಕ್ಕೆ ಸಿಲುಕಿಕೊಂಡು ತಲೆಯ ಭಾಗಕ್ಕೆ ಬಲವಾದ ಪೆಟ್ಟಾಗಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಮೃತ ನಿಂಗಪ್ಪನಿಗೆ ಮೂವ್ವರು ಮಕ್ಕಳು ಮತ್ತು ಮೊಮ್ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪೆÇಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸ್ಥಳೀಯ ಗ್ರಾಮದ ಜನರು ಡಿಪೆÇೀ ವ್ಯವಸ್ಥಾಪಕರು ಸ್ಥಳಕ್ಕೆ ಬರ ಬೇಕೆಂದು ಪಟ್ಟು ಇಡಿದರು. ಗ್ರಾಮಾಂತರ ಪೆÇಲೀಸ್ ಠಾಣಿಯ ಪಿಎಸ್ ಐ ಗಣೇಶ್ ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡು ಶವವನ್ನು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ಮಾರಣೋತ್ತರ ಪರೀಕ್ಷೆಗೆ ಕೊಂಡೋಯ್ಯಲಾಗಿದೆ.