ಸಾರಿಗೆ ನೌಕರರ ಹೋರಾಟಕ್ಕೆ ಜಯ ಕರ್ನಾಟಕ ರಕ್ಷಣಾ ಸೇನೆ ಬೆಂಬಲ

ವಿಜಯಪುರ, ಎ.8-ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಸಾರಿಗೆ ನೌಕರರು ಕರೆ ಕೊಟ್ಟಿರುವ ಕರ್ನಾಟಕ ಬಂದ್‍ಗೆ ನಮ್ಮ ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ನೀಡಿ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಕೃಷ್ಣಾ ಭೊಸಲೆ ಮಾತನಾಡಿ, ಸಾರಿಗೆ ನೌಕರರ ಇಂದಿನ ತುಟಿ ದಿನದಲ್ಲಿ ಕುಟುಂಬ ನಿರ್ವಹಿಸುವುದು ತುಂಬಾ ಕಷ್ಟಕರವಾಗಿದೆ. ಅವರ ಪರಿಸ್ಥೀತಿ ಗಂಭೀರವಾಗಿದೆ ಇದನ್ನು ಸಾರಿಗೆ ಸಚಿವರು ಅರಿತು ಅವರ ಬೇಡಿಕೆಗಳಿಗೆ ತಕ್ಷಣ ಈಡೇರಿಸಬೇಕು.
ಎಲ್ಲಾ ವಲಯದಲ್ಲಿ ವೇತನ ಹೆಚ್ಚಿಗಿದೆ ಆದರೆ ಸಾರಿಗೆ ನೌಕರರಿಗೆ ಮಾತ್ರ ಸದ್ಯ ವೇತನದ ಕೊರತೆವುಂಟಾಗಿದ್ದು, ಇದು ನಗೆಗೀಡಾದ ಸಂದರ್ಭವಾಗಿದೆ. ಸರ್ಕಾರಿ ನೌಕರರ ವೇತನ, ಸೌಲಭ್ಯಗಳನ್ನು ಸಾರಿಗೆ ನೌಕರರಿಗೂ ನೀಡಬೇಕು. ಅವರಿಗೆ ಸಿಗುವ ಎಲ್ಲ ಸವಲತ್ತುಗಳು ಪ್ರತಿಯೊಬ್ಬ ನೌಕರರಿಗೂ ಸಿಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಜು ಭಿಸೆ, ತಾಲೂಕಾಧ್ಯಕ್ಷ ರಾಜು ಕೋಟ್ಯಾಳ, ಉಮೇಶ ರುದ್ರಮುಣಿ, ಸೋಮನಗೌಡ ಪಾಟೀಲ, ರಾಜು ಮನಗುಳಿ, ಗುರುಪಾದ ಹಳ್ಳದ, ಗುಲಾಬ ರಾಠೋಡ, ಮಹೇಶ ಯರನಾಳ, ಯಲ್ಲಪ್ಪ ಪಡಗಾನೂರ, ಶಶಿಧರ ವಲ್ಲ್ಯಾಪೂರ ಮುಂತಾದವರು ಇದ್ದರು.