ಸಾರಿಗೆ ನೌಕರರ ಮುಷ್ಕರ 152 ಕೋಟಿ ನಷ್ಟ

ಬೆಂಗಳೂರು,ಏ.14-ಆರನೇ ವೇತನ ಆಯೋಗದ ಅನ್ವಯ ಸಂಬಳಕ್ಕೆ ಆಗ್ರಹಿಸಿ
ನಡೆಸುತ್ತಿರುವ ಸಾರಿಗೆ ನೌಕರರ ಮುಷ್ಕರದಿಂದ ನಿತ್ಯ ಸಾರಿಗೆ ನಿಗಮಗಳಿಗೆ ಕೋಟಿ ಕೋಟಿ ರೂ. ನಷ್ಟ ಉಂಟಾಗಿದ್ದು, ಕಳೆದ ಎಂಟು ದಿನದಿಂದ 152 ಕೋಟಿಯಷ್ಟು ನಷ್ಟ ಅನುಭವಿಸಿದೆ.
ಬಸ್ ಸಂಚಾರವಿಲ್ಲದೇ ನಾಲ್ಕು ನಿಗಮಗಳ ಆದಾಯಕ್ಕೆ ಪೆಟ್ಟು ಬಿದಿದ್ದು ಪ್ರಯಾಣಿಕರ ಪರದಾಟ ಮುಂದುವರಿದಿದೆ
ಕೆಎಸ್​​ಆರ್​ಟಿಸಿ ನಿತ್ಯ ಕಾರ್ಯಾಚರಣೆಯಿಂದ 7 ಕೋಟಿ ರೂ. ಆದಾಯ, ಬಿಎಂಟಿಸಿ 3 ಕೋಟಿ ರೂ., ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ನಿಗಮಗಳು ತಲಾ ನಿತ್ಯ 3.5 ಕೋಟಿ ರೂ. ಆದಾಯ ಪಡೆಯುತ್ತಿದ್ದವು. ಇದೀಗ ಕೆಲ ದಿನಗಳ ಮುಷ್ಕರದಿಂದ 152 ಕೋಟಿ ರೂ. ನಷ್ಟ ಅನುಭವಿಸಿದೆ.
ಮುಷ್ಕರದಿಂದಾದ ನಷ್ಟ

*ಕೆಎಸ್​​ಆರ್​ಟಿಸಿ – 70 ಕೋಟಿ ರೂ.
*ಬಿಎಂಟಿಸಿ – 20 ಕೋಟಿ ರೂ.
*ಎನ್​​ಡಬ್ಲ್ಯೂಕೆಎಸ್ಆರ್​​ಟಿಸಿ- 30.5 ಕೋಟಿ ರೂ.
*ಎನ್​ಇಕೆಎಸ್ಆರ್​ಟಿಸಿ – 31.5 ಕೋಟಿ‌ ರೂ.