ಸಾರಿಗೆ ನೌಕರರ ಮುಷ್ಕರ ಮಧ್ಯೆಯೂ ೩೩ ಬಸ್‌ಗಳ ಸಂಚಾರ

ಲಿಂಗಸುಗೂರು.ಇ.೧೮-ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮಧ್ಯೆಯೂ ೬೬ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದರಿಂದ ಸ್ಥಳೀಯ ಸಾರಿಗೆ ಘಟಕದಿಂದ ೩೩ ಮಾರ್ಗಗಳಿಗೆ ಬಸ್ ಸಂಚಾರ ಆರಂಭಗೊಂಡಿವೆ.
ಸುರುಪುರ, ಕರ್ನೂಲ್, ಮುದ್ದೇಬಿಹಾಳ, ರಾಯಚೂರು, ಬಾಗಲಕೋಟ, ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಸ್‌ಗಳು ಸಂಚಾರ ಆರಂಭಗೊಂಡಿವೆ. ನೌಕರರ ಕರ್ತವ್ಯಕ್ಕೆ ಹಾಜರಾಗದೇ ಗೈರುರಾಗುವ ಮೂಲಕ ಮುಷ್ಕರ ನಡೆಸುತ್ತಿದ್ದರು ಆದರೆ ಸರ್ಕಾರ ಕೆಲವು ನೌಕರರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ, ಅಮಾನತ್, ಸೇರಿದಂತೆ ಇನ್ನಿತರ ಶಿಸ್ತಿನ ಕ್ರಮಕ್ಕೆ ಮುಂದಾಗುತ್ತಿದ್ದರಿಂದ ನೌಕರರು ಸ್ವಯಂಪ್ರೇರಿತವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇದುಲ್ಲದೇ ಬೇರೆ ಘಟಕಗಳಿಂದಲೂ ಬಸ್‌ಗಳು ಸಂಚಾರ ಮಾಡುತ್ತಿವೆ
ಕರ್ತವ್ಯ ನಿರತ ಚಾಲಕನ ಹಲ್ಲೆ ಮುಂದಾಗಿದ್ದ ಒಟ್ಟು ೭ ಜನ ನೌಕರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಮೀದ್ ಎಂಬ ಚಾಲಕ ಡ್ಯೂಟಿ ಹಾಜರಾಗಿದ್ದನ್ನು ಕೆಲವು ನೌಕರರು ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟದ್ದರಿಂದ ನೌಕರರಾದ ಮಹಾಲಿಂಗಪ್ಪ, ಶರಣಬಸವ ಈ ಇಬ್ಬರನ್ನು ಅಮಾನತ್ ಮಾಡಲಾಗಿದೆ. ಜಗದೀಶ ಮತ್ತು ಗುಂಡಪ್ಪ ಎಂಬ ನೌಕರರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಘಟಕದ ವ್ಯವಸ್ಥಾಪಕ ಆದಪ್ಪ ಕುಂಬಾರ ತಿಳಿಸಿದ್ದಾರೆ.