ಸಾರಿಗೆ ನೌಕರರ ಮುಷ್ಕರ: ಎಂಟು ಜನರ ವರ್ಗಾವಣೆ, 22 ನೌಕರರ ವಿರುದ್ದ ಕೇಸ್

ಹೊಸಪೇಟೆ ಏ17: ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಮಧ್ಯದಲ್ಲೇ ಶುಕ್ರವಾರ ಎಂಟು ಜನ ನೌಕರರನ್ನು ನಾನಾ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಅವರು ಆದೇಶಿಸಿದ್ದಾರೆ.
ಹರಪನಹಳ್ಳಿ ಘಟಕದ ಆರ್. ಇಮಾಮ್ ಅಲಿ, ಕಾಳಪ್ಪ ಎನ್.ಎಂ., ಕೊರವರ ಮಂಜಣ್ಣ, ಹಡಗಲಿಯ ರುದ್ರಪ್ಪ ಗುಡಿ, ಸಂಡೂರಿನ ಶಿವಕುಮಾರ ಕಲ್ಲಳ್ಳಿ, ನಾಗರಾಜ, ಹೊಸಪೇಟೆಯ ಪ್ರಕಾಶ ಬಗೇವಾಡಿ ಮತ್ತು ಕೂಡ್ಲಿಗಿಯ ಬಸವರಾಜ ಎಂಬವರನ್ನು ಬೇರೆ ಜಿಲ್ಲೆ ಘಟಕಗಳಿಗೆ ವರ್ಗಾವಣೆ ಮಾಡಲಾಗಿದೆ. ಚಾಲಕ ಹಾಗೂ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ಇವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಬಸ್‍ಗೆ ಕಲ್ಲು ತೂರಾಟ ಪ್ರಕರಣದಲ್ಲಿ ಈ ವರೆಗೂ 12, ಕರ್ತವ್ಯಕ್ಕೆ ಅಡ್ಡಿ ಪ್ರಕರಣದಲ್ಲ 6, ಕೆಸ್ಮಾ ಕಾಯ್ಡೆಯಡಿ 3, ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ಪ್ರಕರಣದಲ್ಲಿ 1 ನೌಕರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
110 ಸಾರಿಗೆ ಬಸ್ ಓಡಾಟ:
ಸ್ಥಳೀಯ ವಿಭಾಗದಿಂದ ಶನಿವಾರ ಬೆಳಿಗ್ಗೆ 11 ಗಂಟೆಗಾಗಲೇ 110ಕ್ಕೂ ಹೆಚ್ಚು ಸಾರಿಗೆ ಬಸ್‍ಗಳು ಹಾಗೂ ಖಾಸಗಿ ಬಸ್, ಟ್ರ್ಯಾಕ್ಸ್ ಟಂಟಂಗಳು ಓಡಾಟ ನಡೆಸಿವೆ. ನೌಕರರು ಮುಷ್ಕರ ಮುಂದುವರೆಸಿದ್ದರು ಇಂದು ಬೆಳಿಗ್ಗೆ ಯಿಂದಲೇ ಹೆಚ್ಚಿನ ಬಸ್‍ಗಳ ಸಂಚಾರ ಹಾಗೂ ಖಾಸಗಿ ವಾಹನಗಳಿ ಪೈಪೊಟಿ ನಡೆಸಿದಂತೆ ಕಂಡುಬಂದಿದ್ದು ಪ್ರಯಾಣಿಕರಲ್ಲಿ ಸ್ಪಲ್ಪ ಮಟ್ಟಿನ ನೆಮ್ಮದಿಗೂ ಕಾರಣವಾಗಿತು. ಖಾಸಗಿ ವಾಹನಗಳಿಗೆ ಹೆಚ್ಚಿನ ದರ ನೀಡಿಬೇಕಾಗಿರುವ ಪರಿಸ್ಥಿತಿ ಇಂದು ಪ್ರಯಾಣಿಕರು ಬೆಸತ್ತುಹೊಗಿದ್ದು ಅವರ ಮಾತಿನಲ್ಲಿ ಕಂಡುಬಂತು.