ಸಾರಿಗೆ ನೌಕರರ ಮುಷ್ಕರಕ್ಕೆ ದಲಿತಪರ ಸಂಘಟನೆಗಳ ಬೆಂಬಲ

(ಸಂಜೆವಾಣಿ ವಾರ್ತೆ)
ಶಹಾಪುರ:ಎ.18:ಖಾಸಗಿ ಒಡೆತನ ನೀತಿ ಅನುಸಿರಿಕೊಂಡು ದುಡಿಸಿಕೊಳ್ಳುತ್ತಿರುವ ಸಾರಿಗೆ ನೌಕರರಿಗೆ 6 ನೇಯ ವೇತನ ನೀಡಬೇಕು. ಮತ್ತು ಅವರಿಗೆ ಸರ್ಕಾರಿ ನೌಕರರೆಂದು ಪರಿಗಣಿಸಬೆಕು. ಸರ್ಕಾರ ಕೂಡಲೆ ನೌಕರರ ಹಿತಾಶಕ್ತಿಯನ್ನು ಕಾಪಾಡಿಕೊಳ್ಳಬೇಕು ಎಂದು ಆಗ್ರಹಿಸಿ ಶಹಾಪುರ ತಾಲೂಕು ದಲಿತಪರ ಸಂಘಟನೆಗಳು ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ ಅನಿಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೂಡಲೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೆರಿಸಬೇಕು. ಅಲ್ಲದೆ ಅವರಿಗೆ ಸಂಬಳ ಬಿಡುಗಡೆಗೊಳಸಿಬೆಕು. ಎಂದು ಇತ್ಯಾದಿ ಬೇಡಿಕೆಗಳಿಗೆ ಅವರು ಆಗ್ರಹಿಸಿದರು.
ಈ ಕುರಿತು ಸಾರಿಗೆ ನಿಯಂತ್ರಣಾಧಿಕಾರಿಗಳಿಗೆ ಮತ್ತು ಸ್ಥಳಿಯ ಘಟಕಾಧಿಗಳಿಗೆ ಬರೆದ ಮನವಿ ಪತ್ರದಲ್ಲಿ ಅವರು ತಿಳಿಸಿದ್ದಾರೆ. ಈ ಧರಣಿಯಲ್ಲಿ ದಲಿತಪರ ಸಂಘಟನೆಗಳ ಮುಖಂಡರಾದ ನಾಗಣ್ಣ ಬಡಿಗೇರ, ಶಿವುಪುತ್ರ ಜವಳಿ, ಮಾಹಾದೇವ ದಿಗ್ಗಿ, ರಾಯಪ್ಪ ಸಾಲಿಮನಿ, ಅಶೋಕ ಹೊಸಮನಿ, ಮರೆಪ್ಪ ಜಾಲಿಮೆಂಚಿ, ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷರಾದ ಸೈಯದ್ ಕಾಲಿದ ಹುಸೇನಿ, ಮರೆಪ್ಪ ಕನ್ಯಾಕೊಳೂರ, ಚಂದ್ರಶೇಖರ ದೊರನಳ್ಳಿ, ಶರಣು ದೊರನಳ್ಳಿ, ಅರುಣಕುಮಾರ ಸೈದಾಪುರ, ದೆವಿಂದ್ರ ಗೌಡೂರ, ಶರಣಪ್ಪ ಕಡಿಮನಿ, ನಿಂಗಣ್ಣ ರಾಖಮಗೇರಾ, ಸಂಗಣ್ಣ ಸಿದ್ದು ಪೂಜಾರಿ, ಲಿಂಗರಾಜ ಕೊಳ್ಳೂರ, ಶರಣಪ್ಪ ಅನಸಕೂಗೂರ, ಮಲ್ಲಿಕಾರ್ಜುನ ಉಕ್ಕಿನಾಳ, ಹಾಗೂ ಮಹಿಳಾ ಪ್ರಮುಖರಾದ ಗುಂಡಮ್ಮ, ಅಂಬು.ಪರವಿನ, ಶಹನಾಜಬೇಗಂ, ಸುಪೀಯಾಬೇಗಂ, ಅಂಜುಮ, ಸಂಗೀತಾ, ಶರಣಮ್ಮ, ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.