ಸಾರಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ

ಹಗರಿಬೊಮ್ಮನಹಳ್ಳಿ.ಏ.೧೯ ಪಟ್ಟಣದ ಜನವಾದಿ ಮಹಿಳಾ ಸಂಘ ಹಾಗೂ ರಾಜ್ಯ ವಿಕಲಚೇತನರು ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವ್ಯವಸ್ಥಾಪಕರಿಗೆ ಭಾನುವಾರ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಜಿ. ಸರೋಜಾ ಮಾತನಾಡಿ ಸಾರಿಗೆ ನೌಕರರು ಕಳೆದ 11ದಿನಗಳಿಂದ ಮುಷ್ಕರ ನಡೆಸಿದರು ಸರ್ಕಾರ ಯಾವುದೇ ಬೇಡಿಕೆಗಳನ್ನು ಈಡೇರಿಸದೇ ಸ್ಪಂದನೆ ಮಾಡುತ್ತಿಲ್ಲ ಸಾರ್ವಜನಿಕರ ಹಿತದೃಷ್ಟಿ ಸರ್ಕಾರಕ್ಕೆ ಬೇಕಾಗಿಲ್ಲ. ಅದರ ಬದಲಾಗಿ ನೌಕರರಿಗೆ ಬೆದರಿಕೆ ನೀಡುವುದು ಸಮಂಜಸವಲ್ಲ ಕೂಡಲೇ ಸರ್ಕಾರ ನೌಕರರ ಬೇಡಿಕೆಯನ್ನು ಈಡೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಉಸ್ಮಾನ್ ಬಾಷಾ, ರೇಣುಕಾ, ಪಾಯಲ್ ಬಾನು, ಹುಲಿಗೆಮ್ಮ, ಸರ್ದಾರ್ ಹುಲಿಗೆಮ್ಮ, ವಿನೋದ, ಇದ್ದರು .