ಸಾರಿಗೆ ನೌಕರರ ಬೇಡಿಕೆಗೆ ಇಂದು ಸಮ್ಮತಿ
 ಮುಷ್ಕರ ಮಾಡಲ್ಲ: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.15: ಸಾರಿಗೆ ಸಂಸ್ಥೆಯ ಸಿಬ್ಬಂದಿ ಜೊತೆಗೆ ಮುಷ್ಕರದ ಬಗ್ಗೆ  ಮಾತನಾಡಲಾಗ್ತಿದೆ. ಯಾವುದೇ ಕಾರಣಕ್ಕೂ ಅವರು  ಮುಷ್ಕರ ಮಾಡೋದಿಲ್ಲ ಎಂದು
ಸಾರಿಗೆ  ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅವರಿಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ. ವೇತನ ಪರಿಷ್ಕರಣೆ ವಿಚಾರದಲ್ಲಿ ಮಾತುಕತೆ ನಡೆದಿದೆ.
ಹಣಕಾಸಿನ ಇತಿಮಿತಿಯಲ್ಲಿ ಒಂದಷ್ಟು ಮಾಡ್ತೇನೆ ಎಂದಿದ್ದೇ ಅದಕ್ಕೆ ಅವರು ಒಪ್ಪಿಲ್ಲ.  ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡ್ತೇನೆ. ಫೆಡರೇಶನ್ ಅವರ ಜೊತೆ  ಮಾತನಾಡಲು ಎಂ.ಡಿ ಅನ್ಬು ಕುಮಾರ ಈಗಾಗಲೇ ಹೇಳಿದ್ದೇನೆ. ಇವತ್ತು ಅಂತಿಮವಾದ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ವೇತನ ಪರಿಷ್ಕರಣೆ ಮಾಡೋದು ನಿಜ. ಹಣಕಾಸಿನ ಸ್ಥಿತಿಗತಿ ನೋಡಿ ಕೊಂಡು ಸ್ಪಲ್ಪ ಹೆಚ್ಚಳ ಮಾಡ್ತೇವೆ. ತೃಪ್ತಿಯಾಗೋ ರೀತಿ ಕೆಲಸ ಮಾಡ್ತೇವೆ
ಈ ಶ್ರೀರಾಮುಲು ಮಾತುಕೊಟ್ಟರೇ ಉಳಿಸಿಕೊಳ್ತಾರೆ.  ಸರ್ಕಾರಿ‌ ನೌಕರರ ವೇತನ ಪರಿಷ್ಕರಣೆ ಮಾಡಿದ್ದೇವೆ.ಅದೇರೀತಿ ಇವರದ್ದು ಮಾಡಲಿದೆ. ಮುಷ್ಕರಕ್ಕೆ  ಹೋಗೋ ಪರಿಸ್ಥಿತಿ ಬರಲ್ಲ. ಸಾರಿಗೆ ನೌಕರರ ಮುಷ್ಕರದ ಹಿಂದೆ ಯಾರ ಕೈವಾಡ ಇಲ್ಲ ಎಂದರು.
ನೌಕರರ ಮರು ನೇಮಕ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಎಂಟಿಸಿಯಲ್ಲಿ ಕ್ರಿಮಿನಲ್ ಹಿನ್ನಲೆ ಇದ್ದವರು ಮಾತ್ರ ಕೆಲವರು ಉಳಿದಿದ್ದಾರೆ ಅವರನ್ನು ಕೂಡ  ಕೆಲಸಕ್ಕೆ ತೆಗೆದುಕೊಳ್ಳುತ್ತೇವೆಂದರು.