ಸಾರಿಗೆ ನೌಕರರು ಮಾಡುತ್ತಿರುವುದು ಜನ ಸೇವೆ; ತರಳಬಾಳು ಶ್ರೀ

ದಾವಣಗೆರೆ.ಜು.17; ರಾಜ್ಯ ರಸ್ತೆ ಸಾರಿಗೆ ವಾಹನ ಚಾಲಕರು ಹಾಗೂ ನಿರ್ವಾಹಕರು ಮಾಡುತ್ತಿರುವುದು ಸೇವೆ ಅದು ನೌಕರಿಯಲ್ಲ ಎಂದು ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದ್ದಾರೆ.
ನಗರದ ತ್ರಿಶೂಲ್ ಕಲಾಮಂದಿರದಲ್ಲಿ ರಾಜ್ಯ ಸಾರಿಗೆ ನೌಕರರ ರಾಜ್ಯಮಟ್ಟದ ಸಮ್ಮೇಳನ‌ ಉದ್ಘಾಟಿಸಿ ಮಾತನಾಡಿದ ಅವರು
ನಿಗಮದಲ್ಲಿ  ಲಾಭ ನಷ್ಟದ ಆಧಾರದಲ್ಲಿ ನೌಕರರ ಅಭಿವೃದ್ಧಿ ಅಡಗಿದೆ.ಸಾರಿಗೆ ನೌಕರರ ಉದ್ಯೋಗ ಕಂಪನಿಯ ಉದ್ಯೋಗವಲ್ಲ ಇದು ಸೇವಾ ಕಾರ್ಯ.ಸರ್ಕಾರ ನೌಕರರಾಗಿ‌ ಪರಿಗಣಿಸದೆ ಸೇವಾ ಧುರೀಣರು ಎಂದು ಭಾವಿಸುವುದು ಸರ್ಕಾರದ ಹೊಣೆ ಗಾರಿಕೆ.ಇಲ್ಲಿ ಅನೇಕ ತಾರತಮ್ಯ ಇದೆ ಎಂದು ತಿಳಿಸಿದ್ದಾರೆ. ಸರ್ಕಾರದ ಹೊಣೆಗಾರಿಕೆ ಇದೆ.ಈ ಸಮಾರಂಭಕ್ಕೆ ಪ್ರಮುಖ ವ್ಯಕ್ತಿಗಳು ಬಾರದಿರುವುದಕ್ಕೆ ಕಾರಣ ಎಲ್ಲಿ ಮಾತಿಗೆ ಬದ್ದರಾಗಬೇಕಾಗುತ್ತದೆ ಎಂದು ಅಂತಹ ಧರ್ಮ ಸಂಕಟ ಅವರದು ಎಂದರು. ನಿಮ್ಮ ಕಷ್ಟದ‌ಬಗ್ಗೆ ಬಹಿರಂಗವಾಗಿ ಗುರುತಿಸುವಂತೆ ಮಾಡಿದ್ದು ಮುಜುಗರ ತಂದಿದೆ.ಈ ಕೆಲಸ ವಕೀಲರು ಮಾಡುತ್ತಾರೆ ಆದರೆ ನ್ಯಾಯಾಧೀಶರು ಮಾಡುವುದಿಲ್ಲ.ನಾವು ಖಾಸಗಿಯಾಗಿ ಸರ್ಕಾರದ ಗಮನಕ್ಕೆ ತರುತ್ತೇವೆ ಆದರೆ ಬಹಿರಂಗವಾಗಿ ಅಲ್ಲ ಎಂದು ಸ್ಪಷ್ಟ ಪಡಿಸಿದರು.ಸರ್ಕಾರ‌ಮಟ್ಟದಲ್ಲಿ ಸುಲಭವಾಗಿ ಕೆಲಸಗಳಾಗುವುದಿಲ್ಲ.ನಮ್ಮಲ್ಲಿ ಅಧಿಕಾರಶಾಹಿತ್ವ ಹೋಗಬೇಕು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ‌ ಕಷ್ಟ ಸಂಕಷ್ಟವನ್ನು ಗುರುತಿಸಬೇಕಾಗಿದ್ದು ಪ್ರಜಾಪ್ರತಿನಿಧಿಗಳ ಕರ್ತವ್ಯ. ಸಾರಿಗೆ ನೌಕರರ ಕಷ್ಟ ಸರ್ಕಾರಕ್ಕೆ ಗೊತ್ತಿದೆ.ಸಮಾನವೇತನ ನೀಡಬೇಕಾದರೆ ಸರ್ಕಾರಕ್ಕೆ ಎರಡು ಸಾವಿರ ಕೋಟಿ ಬೇಕಾಗಿದೆ ಸರ್ಕಾರದಲ್ಲಿ ಆರ್ಥಿಕ ಸಮಸ್ಯೆ ಇದೆ.ಇದನ್ನು ಸರಿದೂಗಿಸಬೇಕು.ಸೇವಾ ಕಾರ್ಯಗಳಲ್ಲಿ ಲಾಭ ನಷ್ಟವನ್ನು ಲೆಕ್ಕ ತೆಗೆದುಕೊಳ್ಳಬಾರದು.ಬದುಕಿರುವಾಗಲೇ ಸೌಲಭ್ಯ ನೀಡಬೇಕು ಮರಣದ ನಂತರ ನೀಡಿದರೆ ಫಲವಿಲ್ಲ.ನಮ್ಮನ್ನು ಆಹ್ವಾನ ಮಾಡದಿದ್ದರು ನಿಮ್ಮಕಷ್ಟಕ್ಕೆ‌ಸ್ಪಂದಿಸುತ್ತಿದ್ದೆವು
ನೀವು ನಮ್ಮ‌ ಕಕ್ಷಿದಾರರಾಗಬಾರದು ನಾವು ನಿಮ್ಮ ವಕೀಲರಾಗಬಾರದು.ನಿಮ್ಮ ಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು.ಕೆಲ ಬೇಡಿಕೆಗಳಿವೆ ಆರ್ಥಿಕ ಹೊರೆ ಇಲ್ಲದಂತೆ ಸರ್ಕಾರ ಪೂರೈಕೆ ಮಾಡಬಹುದಾಗಿದೆ.
ನೌಕರರ ಮೇಲಿನ ಪ್ರಕರಣ ಹಿಂಪಡೆಯಲು ಸಚಿವರೊಂದಿಗೆ ಮಾತನಾಡಲಾಗುವುದು.
ಧರ್ಮ ಕಾನೂನಿನ ಮಧ್ಯೆ ಸಂಘರ್ಷ ನಡೆಯುತ್ತಿದೆ.ನಮ್ಮ ಅಭಿಪ್ರಾಯದಂತೆ ಧರ್ಮ ಬೇರಯಲ್ಲ ಕಾನೂನು. ನಮ್ಮ ಸಂವಿಧಾನ ಕೇವಲ ಭಾರತಕ್ಕೆ ಮಾತ್ರ ಅನ್ವಿಯಿಸುತ್ತೆ.ಕಾನೂನಿಗೆ ಎಲ್ಲಾ ದೇಶದಲ್ಲೂ ಪ್ರಾಮುಖ್ಯತೆ ಇದೆ ಆದರೆ ಧರ್ಮಕ್ಕೆ ಯಾವುದೇ ಚೌಕಟ್ಟು ಇಲ್ಲ.ಧರ್ಮದ ಪ್ರಮುಖ ಅಂಶಗಳು ಕಾನೂನಿನಲ್ಲಿದೆ.
ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಬಿಡಬಾರದು.ಧಾರ್ಮಿಕ ಮಾನವೀಯತೆಯ ತಳಹದಿಯ ಮೇಲೆ ನಿಮ್ಮ ಹೋರಾಟ ಇರಲಿ.ಜವಾಬ್ದಾರಿಯುತ ಕೆಲಸ ನಿಮ್ಮದು ನಿಮ್ಮನ್ನೂ ಕೂಡ ಸರ್ಕಾರ ಜವಾಬ್ದಾರಿಯುತವಾಗಿ ನಡೆಸಿಕೊಳ್ಳಬೇಕು.
ಮಾನವೀಯ ದೃಷ್ಠಿಯಿಂದ ಸೂಕ್ತವಾಗಿ ನಿರ್ಧಾರ ಕೈಗೊಳ್ಳಬೇಕು ಈ ನಿಟ್ಟಿನಲ್ಲಿ‌ ಸಂಬಂಧಪಟ್ಟವರೊಂದಿಗೆ ಮಾತನಾಡಲಾಗುವುದು ಎಂದರು.
ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ ಯಾವುದೇ ಗಲಭೆಗಳಾಗಲಿ ಮೊದಲು ಬಲಿಯಾಗುವುದೇ ಸಾರಿಗೆ ಸಂಸ್ಥೆ. ಪ್ರತಿಭಟನೆ ನಡೆಸಬಾರದು ನಿಮ್ಮಜೊತೆ ನಾವಿದ್ದೇವೆ‌ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸದಾ ಸಿದ್ದವಾಗಿದ್ದೇನೆ.ನಿಗಮದಲ್ಲಿ ಯಾವುದೇ ತೊಂದರೆಗಳಿದ್ದರೂ ಪರಿಹಾರ ಕಲ್ಪಿಸಲಾಗುವುದು.ಯಾವ ರಾಜಕಾರಣಿಯೂ ಬಸ್ ನಲ್ಲಿ ಸಂಚರಿಸಿಲ್ಲ.ಆದರೆ ನಾನು ಸಂಚಾರಾ ಮಾಡಿದ್ದೇನೆ.ಮುಷ್ಕರ ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಮನವಿಮಾಡಿದರು. ನೌಕರರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲರಾದ ಎಲ್‌ಜಗದೀಶ್,ನೀರಲಕೇರಿ ,ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ,ಚಂಪಕಾವತಿ,ಚಂದ್ರಶೇಖರ್ ಹಿರೇಮಠ ಮತ್ತಿತರರಿದ್ದರು.