ಸಾರಿಗೆ ನೌಕರರು, ಕುಟುಂಬದವರಿಂದ ಮೇಣದ ಬತ್ತಿ ಮೆರವಣಿಗೆ

ಹೊಸಪೇಟೆ ಏ16 :ಆರನೇ ವೇತನ ಜಾರಿಗೊಳಿಸಬೇಕು ಎಂದು ಧರಣಿಯಲ್ಲಿರುವ ಕೆಎಸ್‍ಆರ್‍ಟಿಸಿ ನೌಕರರು ಹಾಗೂ ಅವರ ಕುಟುಂಬವರ್ಗ ಮೇಣದ ಬತ್ತಿ ಮೇರವಣಿಗೆ ಮೂಲಕ ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಗಂಘಿಸಿ ಅನುಮತಿ ಪಡೆಯದೆ ಪ್ರತಿಭಟನೆಗಿಳಿದ ನೌಕರರು ಹಾಗೂ ಕುಟುಂಬವನ್ನು ಹಂಪಿ ವೃತ್ತದ ಬಳಿ ಪ್ರತಿಭಟನಾ ಕಾರರನ್ನು ತಡೆದ ಪೊಲೀಸರು ಮನೆಗಳಿಗೆ ಕಳುಹಿಸಿದರು. ಗಾಂಧಿವೃತ್ತದಿಂದ ಆರಂಭವಾದ ಮೇರವಣಿಗೆ ಅರ್ಧಕ್ಕೆ ತೆರಳುವಂತಾಯಿತು.
ಸಿಐಟಿಯು ಮುಖಂಡ ಭಾಸ್ಕರರೆಡ್ಡಿ ನೌಕರರ ವಿರುದ್ಧ ಸಾರಿಗೆ ಅಧಿಕಾರಿಗಳು ಸರ್ವಾಧಿಕಾರಿ ದೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದ ಅವರು ಕಿರುಕಳ ಒತ್ತಡಗಳ ಮಧ್ಯ ವೇತನ ಪರಿಷ್ಕರಣೆಗೆ ಹೋರಾಟ ನಿರಂತರವಾಗಿದೆ ಎಂದು ಅವರು ರೈತಸಂಘ ಹಾಗೂ ಇತರೆ ಸಂಘಟನೆಗಳು ಬೆಂಬಲವನ್ನು ಸ್ಮರಿಸಿದರು.
ಅಂಗನವಾಡಿ ಯೂನಿಯನ್ ತಾಲೂಕು ಉಪಾಧ್ಯಕ್ಷೆ ಜಿ.ಶಕುಂತಲಾ, ರೈತ ಸಂಘದ ಜೆ.ಕಾರ್ತಿಕ್ ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಮರಡಿ ಜಂಬಯ್ಯನಾಯಕ್ ಸಿಐಟಿಯು ತಾಲೂಕು ಅಧ್ಯಕ್ಷೆ ಕೆ.ನಾಗರತ್ನಮ್ಮ, ಚನ್ನಬಸಪ್ಪ, ಕೆ.ಎಂ. ಸಂತೋಷ ಸೇರಿದಂತೆ ನೌಕರರು ಹಾಗೂ ಅವರ ಕುಟುಂಬವರ್ಗದವರು ಪಾಲ್ಗೊಂಡಿದ್ದರು.