ಸಾರಿಗೆ ನೌಕರರಿಂದ ಬೋಂಡ, ಟೀ ಮಾರಾಟ ಚಳುವಳಿ

ಚಾಮರಾಜನಗರ.ಏ.03- ಸಾರಿಗೆ ನೌಕರರಿಗೆ ಸರ್ಕಾರ ಮುಷ್ಕರ ಸಮಯದಲ್ಲಿ ತೆಗೆದುಕೊಂಡ ಬೇಡಿಕೆಗಳನ್ನು ಸರ್ಕಾರ ಈಡೇರಿಸದ ಕಾರಣ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಸಾರಿಗೆ ನೌಕರರು ಬೋಂಡ ಮತ್ತು ಬಜ್ಜಿ ಹಾಗೂ ಟೀ ಮಾರುವ ಚಳಿವಳಿಯನ್ನು ನಡೆಸಿದರು.
ಸರ್ಕಾರ 9 ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದು ಹೇಳುತ್ತಿರುವ 8 ಭರವಸೆಗಳು ಸಹ ನೌಕರರಿಗೆ ಅನುಕೂಲವಾಗುವ ರೀತಿ ಮಾಡದೆ ಏಕಪಕ್ಷೀಯವಾಗಿ ಸರ್ಕಾರ ಮತ್ತು ಆಡಳಿತ ಮಂಡಳಿ ಸುತ್ತೋಲೆಗಳನ್ನು ಹೊರಡಿಸಿ ಮಾಧ್ಯಮಗಳ ಹಾಗೂ ಸಾರ್ವಜನಿಕರ ಮುಂದೆ ಈಡೇರಿಸಿದ್ದೇವೆ ಎಂದು ಬಿಂಬಿಸುತ್ತಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪೂರ್ವ ತಯಾರಿಯಾಗಿ ವಿಭಿನ್ನ ಚಳುವಳಿಗಳನ್ನು ನಡೆಸಲಾಗುವುದು ಎಂದು ನೌಕರರ ಸಂಘದ ಸದಸ್ಯರಾದ ರಾಮಣ್ಣ ತಿಳಿಸಿದರು.
ಸಾರಿಗೆ ನೌಕರರಿಗೆ ನೀಡಲು ಒಪ್ಪಿರುವ ಆರನೇ ವೇತನ ಅಯೋಗದಂತೆ ವೇತನನೀಡಲು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ ಕಾರಣ ನೌಕರರ ಸಂಘದಿಂದ ಏಪ್ರಿಲ್ 07ರಿಂದ ಅನಿರ್ಧಿಷ್ಟವಾಧಿ ಮುಷ್ಕರ ನಡೆಸಲಾಗುವುದು ಎಂದು ಅವರು ಹೇಳಿದರು.
ಕರ್ತವ್ಯ ಮುಗಿದ ನಂತರ ಸಾರಿಗೆ ಸಂಸ್ಥೆಯ ನೌಕರರು ಸಂಜೆ 5ಗಂಟೆಗೆ ಬಸ್ ನಿಲ್ದಾಣದ ಎದುರು ಚಳುವಳಿ ನಡೆಸಿ, ಟೀ. ಬೋಂಡ, ಬಜ್ಜಿ ಎಂದು ಕೂಗುತ್ತ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಭವಾನಿ, ಜಗದೀಶ್, ನಾಗೇಂದ್ರ, ಮಹೇಂದ್ರ, ತಾಂತ್ರಿಕ ವಿಭಾಗದ ಭಗವತಿ, ಚಂಪ, ಸಂಗೀತ, ಪ್ರಭು ಸೇರಿದಂತೆ ಇನ್ನು ಮುಂತಾದರು ಹಾಜರಿದ್ದರು.