
ಕಲಬುರಗಿ,ಮಾ.27: ರಾಜ್ಯ ರಸ್ತೆ ಸಾರಿಗೆ ನೌಕರರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದ್ದು, ಕೂಡಲೇ ಅದನ್ನು ನಿವಾರಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ. ಮಲ್ಲಿಕಾರ್ಜುನ್ ಮೂರ್ತಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಕ್ಕೆ ನಿಯಮಾವಳಿ ಪ್ರಕಾರ ಸಂಸ್ಥೆಯಲ್ಲಿ ಕಚೇರಿಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಸರ್ಕಾರಿ ನೌಕರರ ಸಂಘಕ್ಕೆ ಕಚೇರಿ ಕೊಡಲಾಗಿದ್ದು, ಪರಿಶಿಷ್ಟ ನೌಕರರ ಸಂಘಕ್ಕೆ ಕಚೇರಿ ಇಲ್ಲ. ಹಾಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಇತ್ತೀಚೆಗೆ ಸಂಘದ ರಾಜ್ಯ ಮಟ್ಟದ ಐದನೇ ಸರ್ವ ಸದಸ್ಯರ ಸಾಮಾನ್ಯ ಸಭೆ ಜರುಗಿತು. ಸಂಘದ ನಾಲ್ಕೂ ನಿಗಮದ ಸಮಿತಿಗಳನ್ನು ವಿಸರ್ಜಿಸಿ ನಾಲ್ಕೂ ನಿಗಮಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಅವರು ಹೇಳಿದರು.
ಗೌರವಾಧ್ಯಕ್ಷರಾಗಿ ಡಿ.ಎಸ್. ವೀರಯ್ಯ, ಅಧ್ಯಕ್ಷರಾಗಿ ಎಂ. ಮಲ್ಲಿಕಾರ್ಜುನ್ ಮೂರ್ತಿ, ಕಾರ್ಯಾಧ್ಯಕ್ಷರಾಗಿ ಎಸ್.ಆರ್. ಅದರಗುಂಚಿ, ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ಹೆಚ್. ಈರಪ್ಪ, ಖಜಾಂಚಿಯಾಗಿ ಎಂ. ಮಂಜು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಗೌರವಾಧ್ಯಕ್ಷರಾಗಿ ಹಣಮಂತ್ ಜಿ. ಯಳಸಂಗಿ, ಅಧ್ಯಕ್ಷರಾಗಿ ಶಿವಶಾಂತ್ ಎಂ. ಮುನ್ನಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಚಿನ್ನ ಖಾಸಿಂ, ಕಾರ್ಯಾಧ್ಯಕ್ಷರಾಗಿ ಭೀಮಶ್ಯಾ ದಂಡಗುಲಕರ್, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಎಸ್.ಆರ್. ಅದರಗುಂಚಿ, ಪ್ರಧಾನ ಕಾರ್ಯದರ್ಶಿಗಳಾಗಿ ಎಲ್.ಎಫ್. ಡೊಂಗ್ರೆ, ಕಾರ್ಯಾಧ್ಯಕ್ಷರಾಗಿ ಹೆಚ್.ಎನ್. ಕೆಂಚಗೇರಿ, ಖಜಾಂಚಿಯಾಗಿ ಎಸ್.ಬಿ. ಗುಡಿ ಅವರನ್ನು ಆಯ್ಕೆ ಮಾಡಲಾಯಿತು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಸುರೇಶ್ ಬಿಲ್ಲಾಡ್, ಅಮೃತ್ ಫಿರಂಗಿ, ಸಂಗಣ್ಣ ಶಾಸ್ತ್ರೀ, ವಸಂತ್ ವಿ. ಗೊಡಬೊಲೆ, ಬಳ್ಳಾರಿ ವಿಭಾಗದ ಆರ್. ಶಿವಪ್ಪ, ಡಿ.ಎಫ್. ನಾಯ್ಕರ್, ಟಿ.ಎಂ. ವೆಂಕಟೇಶ್, ಬಿ.ಸಿ. ಮಹೇಶ್, ರಾಹುಲ್ ಕಂಠಿ, ಶಿವಶಂಕರ್ ಬೌದ್ಧೆ, ನಾಗಪ್ಪ ಮುಂತಾದವರು ಪಾಲ್ಗೊಂಡಿದ್ದರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೆ.ಎಚ್. ಈರಪ್ಪ, ಎಸ್.ಆರ್. ಅದರಗುಂಚಿ, ಶಿವಶಾಂತ್ ಎಂ. ಮುನ್ನೊಳ್ಳಿ, ಬಿ.ಸಿ. ಮಹೇಶ್, ಮಂಜು ಎನ್., ಚಿನ್ನು ಕಾಸಿಂ ಮುಂತಾದವರು ಉಪಸ್ಥಿತರಿದ್ದರು.