ಸಾರಿಗೆ ಇಲಾಖೆಯ ಬಸ್, ನ್ಯಾಯಾಲಯದ ಸಿಬ್ಬಂದಿಗಳಿಂದ ಜಪ್ತಿ

ಸಿಂಧನೂರು.ಜ.೧೨-ಬಸ್ ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ತಡಮಾಡಿದ ಸಾರಿಗೆ ಇಲಾಖೆಯ ಬಸನ್ನು ನ್ಯಾಯಾಲಯದ ಸಿಬ್ಬಂದಿಗಳು ಜಪ್ತಿ ಮಾಡಿಕೊಂಡು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ನಡೆದಿದೆ.
ರತ್ನಮ್ಮ ಗಂಡ ಅಭಿಯಾಸ್ ನಾಗರತ್ನ ತಮ್ಮ ಪತಿ ಮೌನೇಶ ಕಾರಟಿಗಿಯ ಹಂಚಿನಾಳ ಕ್ಯಾಂಪ್ ಹತ್ತಿರ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದು ಪರಿಹಾರ ಕೇಳಿ ನಾಗರತ್ನ ನಗರದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಕೇಸ್ ಮಾಡಿದ್ದರು.
ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣ ಕೈಗೆತ್ತಿಕೊಂಡು ಎರಡು ಕಡೆಯವಾದ ವಿವಾದ ಕೇಳಿ ಅಂತಿಮವಾಗಿ ನಾಗರತ್ನ ಪರ ತೀರ್ಪು ನೀಡಿ ೧೩.೨೨.೫೨೬. ರೂ.ಗಳ ಪರಿಹಾರ ನೀಡುವಂತೆ ಕೋರ್ಟ್ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಆದೇಶ ಮಾಡಿತು.
ಕೋರ್ಟ್ ಆದೇಶ ಪಾಲಿಸದೆ ನಿರ್ಲಕ್ಷ್ಯ ಮಾಡಿ ಪರಿಹಾರ ನೀಡಲು ತಡ ಮಾಡಿದ ಕಾರಣ ಮೃತ ಮೌನೇಶನ ಹೆಂಡತಿ ಎರಡನೆಯ ಸಲ ಕೋರ್ಟ್ ಮೋರೆ ಹೋದ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಸಾರಿಗೆ ಬಸ್‌ನ್ನು ಜಪ್ತಿ ಮಾಡಲು ಆದೇಶ ಮಾಡಿತು.
ನ್ಯಾಯಾಲಯದ ಆದೇಶದ ಮೆರೆಗೆ ನ್ಯಾಯಾಲಯದ ಅಮಿನಾ ಬೂದಿಬಸವ, ಜಾರಿಕಾರರಾದ ಹರಿಕೃಷ್ಣ, ದಿಡ್ಡೆಪ್ಪ, ವಿಜ್ಜಮ್ಮ ಹಾಗೂ ಅರ್ಜಿದಾರಳಾದ ನಾಗರತ್ನ ಇವರ ಸಮ್ಮಖದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ಡಿಪ್ಪೋದ ಸಾರಿಗೆ ಬಸ್ ಸಿಂಧನೂರು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಾಗ ಪ್ರಯಾಣಿಕರನ್ನು ಕೆಳಗೆ ಇಳಿಸಿ ಬಸ್‌ನ್ನು ನ್ಯಾಯಾಲಯಕ್ಕೆ ಸಿಬ್ಬಂದಿಗಳು ತೆಗೆದುಕೊಂಡು ಹೋದ ಘಟನೆ ನಡೆದಿದೆ.ಕೆಲವು ದಿನಗಳ ಹಿಂದೆ ಇದೆ ಥರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ವಿಭಾಗದ ಬಸ್‌ನ್ನು ಜಪ್ತಿ ಮಾಡಿದ್ದು ಇದು ಎರಡನೇಯ ಜಪ್ತಿ ಪ್ರಕರಣವಾಗಿದೆ.