ಸಾರಿಗೆಬಸ್‍ನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

ಕಲಬುರಗಿ,ಜ 12: ಕಳೆದ 10 ರಂದು ಕಲಬುರಗಿಯಿಂದ ಅಳಂದಕ್ಕೆ ಕೆಕೆಆರ್‍ಟಿಸಿ ತಡೆರಹಿತ ಬಸ್‍ನಲ್ಲಿ ಪ್ರಯಾಣಿಸುವಾಗ ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ್ದು ಕಂಡುಬಂದಿದೆ ಎಂದು ಸಮಾಜ ಸೇವಕರಾದ ಯಶವಂತ ಅಂಬಾದಾಸರಾವ ಸೂರ್ಯವಂಶಿ ಅವರು ತಿಳಿಸಿದ್ದಾರೆ. ಬಸ್ ಚಾಲಕನ ಆಸನದ ಮುಂಭಾಗದ ಜಾಗದಲ್ಲಿ ರಾಷ್ಟ್ರಧ್ವಜವನ್ನು ಸಾಧಾರಣ ಬಟ್ಟೆಯಂತೆ ಅಸ್ತವ್ಯಸ್ತವಾಗಿ ಇಡಲಾಗಿತ್ತು.ಚಾಲಕನ ಗಮನಕ್ಕೆ ತಂದರೂ ಆತ ಇದು ಸಹಜ ಎನ್ನುವಂತೆ ಉತ್ತರಿಸಿದನು. ರಾಷ್ಟ್ರಧ್ವಜಕ್ಕೆ ಈ ರೀತಿಯ ಅವಮಾನ ಸರಿಯೇ? ಎಂದು ಯಶವಂತ ಅಂಬಾದಾಸರಾವ ಸೂರ್ಯವಂಶಿ ಪ್ರಶ್ನಿಸಿದ್ದಾರೆ.