ಸಾರಾ ಅಲಿ ಖಾನ್ ಹೇಳಿದರು: ನನ್ನ ತಾಯಿ ಅಮೃತಾ ಸಿಂಗ್ ನನ್ನೊಂದಿಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ

ನಟಿ ಸಾರಾ ಅಲಿ ಖಾನ್ ತಮ್ಮ ತಾಯಿ, ನಟಿ ಅಮೃತಾ ಸಿಂಗ್ ಅವರೊಂದಿಗೆ ಜಾಹೀರಾತಿನಲ್ಲಿ ಈಗಾಗಲೇ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದರೆ ಈ ದಿನಗಳಲ್ಲಿ ತಾಯಿ ಅಮೃತಾ ಸಿಂಗ್ ತನ್ನ ಜೊತೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಎಂದು ತನಗೆ ಅನಿಸುತ್ತಿದೆ ಎಂಬ ಮಾತು ಸಾರಾ ಹೇಳುತ್ತಿದ್ದಾರೆ.
ಸಾರಾ ಈ ಮೊದಲೇ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಪ್ರಸ್ತುತ ಅವರ ಮುಂಬರುವ ಫಿಲ್ಮ್ ’ಅತರಂಗಿ ರೇ’ ಮೂಲಕ ಪ್ರಚಾರದಲ್ಲಿದ್ದಾರೆ.
ತಾಯಿ ಅಮೃತಾ ಅವರು ನನಗೆ ಅತ್ಯುತ್ತಮವಾದದ್ದನ್ನು ಪ್ರದರ್ಶಿಸಲು ಬಯಸುತ್ತಾರೆ ಎಂದಿರುವ ಸಾರಾ, ಸಂದರ್ಶನವೊಂದರಲ್ಲಿ ಮಾತಾಡುತ್ತಾ- “ಅವರು ನನ್ನೊಂದಿಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರು ನನ್ನ ತಾಯಿ. ಶಾಟ್ ಸಮಯದಲ್ಲಿ ನನ್ನ ಮುಖದ ಮೇಲೆ ಒಂದು ವೇಳೆ ತಲೆಕೂದಲು ಬಿದ್ದರೂ, ಅವರು ’ಕಟ್’ ಎಂದು ಹೇಳಬಹುದು ,ಮತ್ತು ನನ್ನ ಕೂದಲನ್ನು ಅವರು ನೇರಗೊಳಿಸಲು ಬಯಸುತ್ತಾರೆ. ನಾನು ಅವರ ಮಗಳಾಗಿರುವುದರಿಂದ ನನಗೆ ಉತ್ತಮವಾದದ್ದನ್ನು ತೋರಿಸಲು ನನ್ನ ತಾಯಿ ಸಹಜವಾಗಿಯೇ ಯೋಚಿಸುತ್ತಾರೆ.” ಎನ್ನುತ್ತಾರೆ ಸಾರಾ.
“ನಿಮ್ಮ ಕೆಲಸದಲ್ಲಿ ನಿಮ್ಮ ೧೦೦ ಶೇಕಡಾವನ್ನು ನೀವು ನೀಡಬೇಕು, ಆಗ ಮಾತ್ರ ನೀವು ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಅವರು ಉತ್ಸಾಹದಿಂದ ಕೆಲಸಕ್ಕೆ ಹೋಗುತ್ತಾರೆ ಮತ್ತು ದುಪ್ಪಟ್ಟು ಉತ್ಸಾಹದಿಂದ ಹಿಂತಿರುಗುತ್ತಾರೆ. ಮನೆಗೆ ಹಿಂದಿರುಗಿದ ತಕ್ಷಣ ಹೇಳುತ್ತಾರೆ-, ನಾನು ತುಂಬಾ ಖುಷಿಪಟ್ಟೆ ಮತ್ತು ಒಳ್ಳೆಯ ಕೆಲಸ ಮಾಡಿದೆ ಎಂದು.ನಮ್ಮ ಕೆಲಸವೇ ನಮ್ಮ ಹವ್ಯಾಸವಾಗಿರುವುದು ಕೂಡಾ ನಮ್ಮ ಅದೃಷ್ಟ”ಎನ್ನುತ್ತಾರೆ ಸಾರಾ.
ಟಿವಿ ಚಾನೆಲ್ ಕಾರ್ಯಕ್ರಮವೊಂದರಲ್ಲಿ, ಸಾರಾ ಅವರ ಪೋಷಕರಾದ ಸೈಫ್ ಅಲಿ ಖಾನ್ ಮತ್ತು ಅವರ ಮೊದಲ ಪತ್ನಿ ಅಮೃತಾ ಸಿಂಗ್ ಸಲಹೆ ನೀಡಿದ್ದರಂತೆ. “ಯಾವುದೇ ಫಿಲ್ಮ್ ಕೇವಲ ಎರಡು ಗಂಟೆಗಳ ಕಾಲ ಅಲ್ಲ” ಎಂದು ತಾಯಿ ಯಾವಾಗಲೂ ನನಗೆ ಹೇಳುತ್ತಾರೆ.ಅಂದರೆ ಇದು ಕನಿಷ್ಠ ಒಂದು ವರ್ಷ ಎನ್ನುವುದು ಅವರ ನಿಲುವು ಆಗಿದೆ”. ಅಮೃತಾ ಸಿಂಗ್ ಅವರು ೧೯೮೦ ಮತ್ತು ೧೯೯೦ ರ ದಶಕಗಳಲ್ಲಿ ಅನೇಕ ಹಿಟ್ ಫಿಲ್ಮ್ ಗಳನ್ನು ನೀಡಿದ್ದರು. ಬೇತಾಬ್ ಸೇರಿದಂತೆ ಹಲವು ಫಿಲ್ಮ್ ಗಳಲ್ಲಿ ಕೆಲಸ ಮಾಡಿದ್ದಾರೆ. , ಮರ್ದ್, ನಾಮ್ ಮತ್ತು ಐನಾ……ಇತ್ಯಾದಿ.

’ಯುವರ್ ಆನರ್” ವೆಬ್ ಸೀರೀಸ್ ನ ಜಿಮ್ಮಿ ಶೆರ್ಗಿಲ್

ಕಳೆದ ತಿಂಗಳು ಬಿಡುಗಡೆಯಾದ ’ಯುವರ್ ಹಾ(ಆ)ನರ್ ೨’ ವೆಬ್ ಸರಣಿಯಲ್ಲಿ ಜಿಮ್ಮಿ ಶೆರ್ಗಿಲ್ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡರು. ಹಿಂದಿನ ಸೀಸನ್ ’ಯುವರ್ ಆನರ್’ ಕೂಡ ಪ್ರೇಕ್ಷಕರಿಂದ ಹೆಚ್ಚು ಮೆಚ್ಚುಗೆ ಪಡೆದಿತ್ತು. ಜಿಮ್ಮಿ ನಿಜ ಜೀವನದಲ್ಲೂ ಬೆಳ್ಳಿತೆರೆಯಲ್ಲಿ ಕಾಣುವಷ್ಟು ರೊಮ್ಯಾಂಟಿಕ್. ಇವರ ಪ್ರೇಮ ಜೀವನವೂ ಸಂಪೂರ್ಣತೆ ಹೊಂದಿದೆ. ಜಿಮ್ಮಿ ಪ್ರಿಯಾಂಕಾ ಪುರಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಡಿಸೆಂಬರ್ ೩ ಕ್ಕೆ ಜಿಮ್ಮಿ ಅವರ ೫೧ ನೇ ಹುಟ್ಟುಹಬ್ಬ ಆಚರಿಸಲಾಗಿತ್ತು.


ಜಿಮ್ಮಿ ಶೆರ್ಗಿಲ್ ೧೯೯೬ ರ ಥ್ರಿಲ್ಲರ್ ’ಮಾಚಿಸ್’ನೊಂದಿಗೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಜಿಮ್ಮಿ ಶೆರ್ಗಿಲ್ ೨೦೦೫ ರಲ್ಲಿ ಯಾರನ್ ನಾಲ್ ಬಹರನ್ (೨೦೦೫ ಫಿಲ್ಮ್) ಮೂಲಕ ಪಂಜಾಬಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಪಂಜಾಬಿ ಸಿನಿಮಾದಲ್ಲಿಯೂ ಅವರ ಗಮನಾರ್ಹ ಫಿಲ್ಮ್ ಎಂದರೆ ಮೆಲ್ ಕರಾಡೆ ರಬ್ಬಾ (೨೦೧೦), ಧರ್ತಿ (೨೦೧೧), ಆ ಗಯೆ ಮುಂಡೇ ಯುಕೆ ದೇ (೨೦೧೪), ಮತ್ತು ದನಾ ಪಾನಿ (೨೦೧೮).
೩ ಡಿಸೆಂಬರ್ ೧೯೭೦ ಅವರ ಜನ್ಮದಿನ. ಬಾಲಿವುಡ್ ಮತ್ತು ಪಂಜಾಬ್ ಫಿಲ್ಮ್ ಗಳಲ್ಲಿ ಅವರು ಅಭಿನಯಿಸಿದ್ದಾರೆ.
ಜಿಮ್ಮಿ ಶೆರ್ಗಿಲ್, ಮಾಹಿ ಗಿಲ್, ಮೀತಾ ವಶಿಷ್ಟ್, ಗುಲ್ಶನ್ ಗ್ರೋವರ್, ರಿಚಾ ಪಲೋಡ್ ಅಭಿನಯದ ’ಯುವರ್ ಆನರ್’ ಸರಣಿಯ ಎರಡನೇ ಸೀಸನ್ ಕಳೆದ ತಿಂಗಳು ೧೯ ರಂದು ಸೋನಿ ಲಿವ್ ನಲ್ಲಿ ಬಿಡುಗಡೆ ಆಗಿದೆ. ಒಟ್ಟು ೧೦ ಸಂಚಿಕೆಗಳನ್ನು ಮಾಡಲಾಗಿದೆ. ಇದರ ಐದು-ಐದು ಸಂಚಿಕೆಗಳು ಓಟಿಟಿ ಪ್ಲಾಟ್‌ಫಾರ್ಮ್ ಸೋನಿ ಲಿವ್‌ನಲ್ಲಿ ಸ್ಟ್ರೀಮ್ ಆಗಿವೆ.
ಮೊದಲ ಸೀಸನ್‌ನ ಚಿತ್ರೀಕರಣವನ್ನು ಕರೋನಾ ಅವಧಿಯ ಮೊದಲು ಮಾಡಲಾಗಿತ್ತು, ಆದರೆ ಎರಡನೇ ಸೀಸನ್‌ನ ಶೂಟಿಂಗ್ ಲಾಕ್‌ಡೌನ್ ಸಮಯದಲ್ಲಿ ಪ್ರಾರಂಭವಾಯಿತು. ಮೊದಲ ಸೀಸನ್ ತುಂಬಾ ಮುಂಚೆಯೇ ಬಿಡುಗಡೆಯಾಗುತ್ತದೆ ಎಂದು ಮೊದಲು ಭಾವಿಸಲಾಗಿತ್ತು, ಆದರೆ ಮೊದಲ ಸೀಸನ್ ಯಾವಾಗ ವೆಬ್ ನಲ್ಲಿ ಬಂತೋ
ಆ ಸಮಯಕ್ಕೆ ಬಹುತೇಕ ಎರಡನೇ ಸೀಸನ್‌ನ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು ಎನ್ನುತ್ತಾರೆ.
೧೮ ಜೂನ್ ೨೦೨೦ ಕ್ಕೆ ಮೊದಲ ಸೀಸನ್ ಬಂದರೆ,೧೯ ನವಂಬರ್ ೨೦೨೧ ಕ್ಕೆ ಎರಡನೇ ಸೀಸನ್ ಆರಂಭವಾಯಿತು.ಕೊರೊನಾ ಕಾರಣ ಬಿಡುಗಡೆ ಮುಂದಕ್ಕೆ ಹೋಗಿತ್ತು.
ಈ ವರ್ಷ ಡಿಸೆಂಬರ್-ಜನವರಿಯಲ್ಲಿ ಒಂದೊಂದೇ ಬಾಗಿಲು ತೆರೆದುಕೊಂಡವು, ನಂತರ ಶೂಟಿಂಗ್ ಸಿದ್ಧತೆಗಳು ಮತ್ತೆ ಪ್ರಾರಂಭವಾದವು. ಲಾಕ್ ಡೌನ್ ಆಗುತ್ತಿದ್ದ ಕಾರಣ ಅದರಲ್ಲೂ ಚಿತ್ರೀಕರಣಕ್ಕೆ ಬಹಳ ಕಷ್ಟ ಎದುರಿಸಬೇಕಾಯ್ತು.ಮರು ಚಿತ್ರೀಕರಣಕ್ಕೆ ಬಹಳ ಸಮಯ ಹಿಡಿಯಿತು. ಆದರೆ ಇದು ನಮ್ಮೊಂದಿಗೆ ಮಾತ್ರವಲ್ಲ, ಇಡೀ ಸರಣಿ ಮತ್ತು ಚಲನಚಿತ್ರಗಳ ಮೇಲೆ ಪ್ರಭಾವ ಬೀರಿತ್ರು ಎನ್ನುತ್ತಾರೆ ಜಿಮ್ಮಿ ಶೆರ್ಗಿಲ್.
’ಯುವರ್ ಆನರ್’ನಲ್ಲಿ ನಟರು ಮೀತಾ ವಶಿಷ್ಟ್, ಗುಲ್ಶನ್ ಗ್ರೋವರ್ ಇದ್ದು ಇವರ ಜೊತೆ , ಬಾಂಧವ್ಯ ಹೇಗಿತ್ತು? ಎಂದರೆ-
“ಇಬ್ಬರಲ್ಲೂ ಉತ್ತಮ ಬಾಂಧವ್ಯವಿತ್ತು. ಮೊದಲ ಸೀಸನ್‌ನಲ್ಲಿಯೂ ಮೀತಾ ಜಿ ಮತ್ತು ಪುಲ್ಕಿತ್ ಜಿ ಇದ್ದರು. ನಾನು ಗುಲ್ಶನ್ ಜಿ ಜೊತೆ ಆರು-ಏಳು ಯೋಜನೆಗಳನ್ನು ಮಾಡಿದ್ದೇನೆ. ಗುಲ್ಶನ್ ಜೀ ಈ ಸೀಸನ್‌ನಲ್ಲಿದ್ದಾರೆ ಎಂದು ತಿಳಿದಾಗ ಇನ್ನಷ್ಟು ಮೋಜು ಮಾಡೋಣ ಎಂದುಕೊಂಡೆ ಎನ್ನುತ್ತಾರೆ ಜಿಮ್ಮಿ.

೪ ನೇ ವಯಸ್ಸಿನಲ್ಲಿ, ದಿಯಾ ಮಿರ್ಜಾ ತನ್ನ ಹೆತ್ತವರ ವಿಚ್ಛೇದನವನ್ನು ನೋಡಿದ್ದರು

ಸುಂದರ ನಟಿ ದಿಯಾ ಮಿರ್ಜಾ ೯೦ ರ ದಶಕದಲ್ಲಿ ಸಾಕಷ್ಟು ಹೆಸರು ಗಳಿಸಿದ ಬಾಲಿವುಡ್ ಫಿಲ್ಮ್ ರಂಗದ ಯಶಸ್ವಿ ನಟಿಯರಲ್ಲಿ ಎಣಿಸಲ್ಪಡುತ್ತಾರೆ. ಫಿಲ್ಮ್ ರಂಗದಲ್ಲಿ ಒಂದರ ಹಿಂದೆ ಒಂದರಂತೆ ಹಲವು ಸಿನಿಮಾಗಳು ಬಂದಿವೆ. ಕೆಲವು ತೊಂದರೆ, ಕಷ್ಟಗಳ ನಂತರ ನಟಿಯ ವೈಯಕ್ತಿಕ ಜೀವನವು ಇಂದು ಚೆನ್ನಾಗಿದೆ, ಆದರೆ ಅವರು ತನ್ನ ಬಾಲ್ಯದಲ್ಲಿ ಬಯಸಿದ ತನ್ನ ಹೆತ್ತವರ ಪ್ರೀತಿಯನ್ನು ಎಂದೂ ನೋಡಲಿಲ್ಲ.
ಪೋಷಕರು ವಿಚ್ಛೇದನ ಪಡೆದಾಗ ಇವರಿಗೆ ೪ ವರ್ಷ. ಈ ವಿಷಯವನ್ನು ಸ್ವತಃ ನಟಿಯೇ ಬಹಿರಂಗಪಡಿಸಿದ್ದಾರೆ. ಡಿಸೆಂಬರ್ ೯, ೧೯೮೧ ರಂದು ಜನಿಸಿದ ದಿಯಾ ಅವರಿಗೆ ಈಗ ೪೦ ರ ಹತ್ತಿರವಾಗಿದೆ.


ತನ್ನ ಸಂದರ್ಶನದಲ್ಲಿ, ದಿಯಾ ತನ್ನ ಮದುವೆಯ ವಿಫಲತೆಯಿಂದ ಹಿಡಿದು ತನ್ನ ಹೆತ್ತವರ ವಿಚ್ಛೇದನದವರೆಗೆ ಸಂಬಂಧಿಸಿದ ಎಲ್ಲಾ ಘಟನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಈ ಸಮಯದಲ್ಲಿ, ಅವರು ಮೊದಲ ಬಾರಿಗೆ ತಮ್ಮ ಮಲತಂದೆಯ ಬಗ್ಗೆ ಹೇಳಿದರು. ನನ್ನ ಮಲತಂದೆ ಅದ್ಭುತ ವ್ಯಕ್ತಿಯಾಗಿದ್ದರು ಎಂದು ದಿಯಾ ಹೊಗಳಿದ್ದಾರೆ.ಅವರನ್ನು ತಂದೆಯಾಗಿ ಸ್ವೀಕರಿಸಲು ನನಗೆ ಬಹಳ ಸಮಯ ಹಿಡಿಯಿತು. ಆದರೆ ಅವರು ನನ್ನನ್ನು ತನ್ನ ಸ್ನೇಹಿತನನ್ನಾಗಿ ಮಾಡಿಕೊಂಡನು. ೧೮ ನೇ ವಯಸ್ಸಿನಲ್ಲಿ, ನಾನು ಅವರ ಆರೈಕೆಯನ್ನು ಬಿಟ್ಟು ಹೈದರಾಬಾದ್‌ನಿಂದ ಹೋಗಬೇಕಾದಾಗ ನನಗೆ ಹೆಚ್ಚು ದುಃಖವಾಯಿತು. ಈ ಸಂದರ್ಶನದಲ್ಲಿ ದಿಯಾ ಕೂಡ ’ತಾನು ಅವರನ್ನು ಮಲತಂದೆ ಎಂದು ಕರೆಯಲು ಇಷ್ಟಪಡುವುದಿಲ್ಲ. ತನ್ನ ತಂದೆ ಇಬ್ಬರೂ ತನಗೆ ಜೀವನದಲ್ಲಿ ಮುಖ್ಯವಾದ ಪಾಠಗಳನ್ನು ಕಲಿಸಿದ್ದಾರೆ ಎಂದು ದಿಯಾ ಹೇಳಿದರು.
ತಾನು ೯ ನೇ ವಯಸ್ಸಿನಲ್ಲಿ ನನ್ನ ಜೈವಿಕ ತಂದೆಯನ್ನು ಕಳೆದುಕೊಂಡೆ. ಮತ್ತು ತಾನು ೨೩ ವರ್ಷ ವಯಸ್ಸಿನವಳಾಗಿದ್ದಾಗ ತನ್ನ ಮಲತಂದೆ ನಿಧನರಾದರು ಎಂದು ದಿಯಾ ತುಂಬಾ ದುಃಖದಿಂದ ಹೇಳಿದರು.
ದಿಯಾ ಕೂಡ ಇಲ್ಲಿ ತಾಯಿಯನ್ನು ಹೊಗಳಿದ್ದಾರೆ. ಇಬ್ಬರು ಗಂಡಂದಿರನ್ನು ಕಳೆದುಕೊಂಡ ನಂತರವೂ ತನ್ನ ತಾಯಿ ತನ್ನನ್ನು ಬೇರೆಯಾಗಲು ಬಿಡಲಿಲ್ಲ. ಅವಳು ನನ್ನ ಜೀವನದಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದಿದ್ದಾರೆ.
“ಯಾರೊಂದಿಗಾದರೂ ೧೧ ವರ್ಷಗಳನ್ನು ಕಳೆದ ನಂತರ ಇದ್ದಕ್ಕಿದ್ದಂತೆ ಬೇರ್ಪಡುವುದು ಸುಲಭವಲ್ಲ, ಆದರೆ ದಿಯಾ ತನ್ನ ಪತಿಯಿಂದ ಬೇರ್ಪಟ್ಟರು. ಮಾತ್ರವಲ್ಲದೆ ಅವರು ಯಾವುದೇ ದೂರುಗಳಿಲ್ಲದೆ ತಮ್ಮ ಸಂಬಂಧಕ್ಕೆ ಸಂತೋಷದಿಂದ ಮುಕ್ತಾಯ ಹಾಡಿದರು. ತನ್ನ ಮತ್ತು ತನ್ನ ಗಂಡನ ಹೊಂದಾಣಿಕೆ ಸರಿಯಿಲ್ಲ, ಆದ್ದರಿಂದ ಅವರು ಸಂಬಂಧವನ್ನು ಕೊನೆಗೊಳಿಸಿದ್ದಾಗಿ ಹೇಳಿದ್ದರು.
ಈ ನಿರ್ಧಾರ ತೆಗೆದುಕೊಳ್ಳುವುದು ದಿಯಾಗೆ ಅಷ್ಟು ಸುಲಭ ಆಗಿರಲಿಲ್ಲ .ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಯೋಚಿಸಿದಾಗ, ದಿಯಾರಿಗೆ ಬಾಲ್ಯದ ದೃಶ್ಯ ನೆನಪಾಯ್ತು. ತಾನು ೪ ವರ್ಷ ವಯಸ್ಸಿನವಳಾಗಿದ್ದಾಗ ತನ್ನ ಹೆತ್ತವರು ಬೇರ್ಪಟ್ಟಿದ್ದಾರೆ ಎಂದಾಗ ತನಗೆ ಎಷ್ಟು ನೋವಾಗಿದ್ದಿರಬಹುದು. ತನ್ನ ಮನಸ್ಸಿಗೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಆ ನೋವು ಸಹಿಸಲು ಆಗುತ್ತದೆ ಎಂದಾಗ , ತನ್ನ ೩೭ ನೇ ವಯಸ್ಸಿನಲ್ಲಿ ವಿಚ್ಛೇದನದಿಂದ ಚೇತರಿಸಿಕೊಳ್ಳುವುದಕ್ಕೂ ಸಾಧ್ಯ ಎಂದು ತಾನು ನಂಬಿದ್ದಾಗಿ ದಿಯಾ ಹೇಳಿದ್ದಾರೆ.