ಸಾರಾ ಅಣ್ಣಯ್ಯ ಹೊಸ ಫೋಟೋಶೂಟ್

ಮುಂಬೈ,ಏ.೧೭-ಕನ್ನಡತಿ ಧಾರವಾಹಿ ಖ್ಯಾತಿಯ ಸಾರಾ ಅಣ್ಣಯ್ಯ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸಮ್ಮರ್ ಟ್ರಿಪ್‌ನಲ್ಲಿ ಎಂಜಾಯ್ ಮಾಡ್ತಿರುವ ನಟಿ ಸಾರಾ ಬೇಸಿಗೆಯ ಕೂಲ್ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯೇ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಸದ್ಯ ಹೊಸದಾಗಿ ಫೋಟೋಶೂಟ್ ಮಾಡಿಸಿರುವ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಗ್ಲೋಯಿಂಗ್ ಎಂದು ಫೋಟೋಗಳಿಗೆ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಜೀನ್ಸ್ ಮತ್ತು ಕ್ರಾಪ್ ಟಾಪ್ ಧರಿಸಿ ಕ್ಯಾಮೆರಾಗೆ ಕ್ಯೂಟ್ ಆಗಿ ಫೋಸ್ ಕೊಟ್ಟಿದ್ದು, ಸಾರಾ ಫೋಟೋಗಳಿಗೆ ೨ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ್, ಬ್ಯೂಟಿ, ಕ್ಯೂಟ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ.
ಸಾರಾ ಅಣ್ಣಯ್ಯ ಅವರು ಯಾವಾಗಲೂ ಮಾರ್ಡನ್ ಆಗಿ ಇರುತ್ತಾರೆ. ಧಾರಾವಾಹಿ ಆದ್ರೂ ಸರಿ, ನಿಜ ಜೀವನದಲ್ಲಾದ್ರೂ ಸರಿ. ಆದ್ರೆ ಸಾರಾ ಅವರಿಗೆ ಟ್ರೆಡಿಷನಲ್ ಲುಕ್ ಸಹ ಮ್ಯಾಚ್ ಆಗುತ್ತೆ. ಇಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸಾರಾ ಆಗಾಗ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.