ಸಾಯಿ ಪ್ರಕಾಶ್‌ಗೆ ನಿರ್ದೇಶಕ ಸಾರ್ವಭೌಮ ಪ್ರಶಸ್ತಿ

ಬೆಂಗಳೂರು.ಜ೧೨:ಖ್ಯಾತ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರಿಗೆ “ನಿರ್ದೇಶಕ ಸಾರ್ವಭೌಮ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರವಿಸಂತು ಬಳಗ ಹಾಗೂ ರೋಟರಿ ಹೈಗ್ರೌಂಡ್ ಸಂಸ್ಥೆ ಸಹಯೋಗದಲ್ಲಿ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಮೈಸೂರು ಕಲಾಮಂದಿರದಲ್ಲಿ ಆಯೋಜಿಸಲಾಗಿತ್ತು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಟಿ. ಶಿವಕುಮಾರ್ ನಾಗರ ನವಿಲೆ, ಚಿತ್ರನಟಿ ಭವ್ಯ, ರವಿಸಂತೋಷ್, ರೊಟೇರಿಯನ್ ಚಂದ್ರಶೇಖರ್ ಧನಂಜಯ್ ಹೆಸರಾಂತ ಗಾಯಕಿ ಮಾನಸ ಹೊಳ್ಳ, ವಿದುಷಿ ನಂದಿನಿ ನಾರಾಯಣ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.