ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ಭರ್ಜರಿ ರಿಯಾಯಿತಿ

ಬೆಂಗಳೂರು, ಆ. ೧೮- ಖ್ಯಾತ ಆಭರಣ ಮಳಿಗೆಯಾದ ಸಾಯಿ ಗೋಲ್ಡ್ ಪ್ಯಾಲೇಸ್ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ‘ಆಂಟಿಕ್ ಹಾಗೂ ಟೆಂಪಲ್ ಜ್ಯುವೆಲರಿ ಮೇಳ’ವನ್ನು ಆಯೋಜಿಸಿದೆ.
ದೇಶದ ಎಲ್ಲಾ ರಾಜ್ಯಗಳ ಆಭರಣ ತಯಾರಕರು ಸಿದ್ದಪಡಿಸಿದ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದೈವಿಕ ಆಭರಣ, ಪಾರಂಪರಿಕ ಒಡವೆಗಳು, ಆನ್ ಕಟ್ ರೂಬಿ ಆಭರಣ, ಅನ್‌ಕಟ್ ಎಮರಾಲ್ಡ್ ಆಭರಣ ಹೀಗೆ ವೈವಿಧ್ಯಮಯ ಚಿನ್ನದ ಆಂಟಿಕ್ ಆಭರಣದ ಅಮೋಘ ಸಂಗ್ರಹಗಳ ಮೂಲಕ ಜನರನ್ನು ಆಕರ್ಷಿಸಲು ಸಾಯಿ ಗೋಲ್ಡ್ ಪ್ಯಾಲೇಸ್ ಸಜ್ಜಾಗಿದೆ.
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಗ್ರಾಹಕರಿಗಾಗಿ ಮೇಕಿಂಗ್ ಚಾರ್ಜ್ ಮೇಲೆ ಶೇ. ೧೫ ರಷ್ಟು ರಿಯಾಯಿತಿ ಮತ್ತು ವೆಸ್ಟೇಜ್ ಜಾರ್ಜ್ ರಹಿತವಾಗಿ ಆಭರಣಗಳನ್ನು ನೀಡುತ್ತಿದೆ. ಸಾಯಿ ಸಮೃದ್ಧಿ ಉಳಿತಾಯ ಯೋಜನೆ ಮತ್ತು ಸಾಯಿ ನಿತ್ಯ ನಿಧಿ ಉಳಿತಾಯ ಯೋಜನೆಗಳ ಪ್ರಯೋಜನಗಳನ್ನು ಕೂಡ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
ಈ ಕುರಿತು ಮಾತನಾಡಿದ ಸಾಯಿ ಗೋಲ್ಡ್ ಪ್ಯಾಲೇಸ್‌ನ ಮಾಲೀಕ ಡಾ. ಟಿ.ಎ. ಶರವಣ, “ಗ್ರಾಹಕರು ತಮ್ಮ ನೆಚ್ಚಿನ ವಿನ್ಯಾಸದ ಆಭರಣಗಳನ್ನು ಮುಂಗಡವಾಗಿ ಕಾಯ್ದಿರಿಸಿ, ವರಮಹಾಲಕ್ಷ್ಮಿ ಹಬ್ಬದ ದಿನದಂದು ಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳಿ. ಈ ಎಲ್ಲಾ ಕೊಡುಗೆಗಳನ್ನು ಬಸವನಗುಡಿ, ಎಚ್‌ಎಸ್‌ಆರ್ ಲೇ ಔಟ್, ಯಲಹಂಕ, ಕೆ.ಆರ್. ಪುರಂ ಮತ್ತು ನಾಗರಬಾವಿಯ ಎಲ್ಲಾ ಶಾಖೆಗಳಲ್ಲಿ ನೀಡಲಾಗುತ್ತಿದ್ದು, ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು” ಎಂದರು.