ಸಾಯಿ ಕೃಷ್ಣ ಕ್ರೀಡಾಂಗಣ ಲೋಕಾರ್ಪಣೆ

ಚಿಕ್ಕಬಳ್ಳಾಪುರ.ಜ೧೯:ತಾಲೂಕಿನ ಸತ್ಯಸಾಯಿ ಗ್ರಾಮದಲ್ಲಿ ಉದ್ಘಾಟನೆಗೊಂಡ ಸಾಯಿ ಕೃಷ್ಣ ಕ್ರಿಕೆಟ್ ಕ್ರೀಡಾಂಗಣದ ನೆನಪಿಗಾಗಿ ಒಂದು ಜಗತ್ತು ಒಂದು ಕುಟುಂಬ ಘೋಷಣೆಯಡಿ ಆಯೋಜಿಸರುವ ಒಂದು ಕಪ್ ಪಂದ್ಯಾವಳಿಗೆ ಭರ್ಜರಿ ಚಾಲನೆ ಸಿಕ್ಕಿದೆ.
ಮಾಸ್ಟರ್ ಬಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ನಾಯಕತ್ವ ಎರಡು ತಂಡಗಳಲ್ಲಿ ೭ ರಾಷ್ಟ್ರಗಳ ೨೪ ಆಟಗಾರರು ಆಟದಲ್ಲಿ ಪಾಲ್ಗೊಂಡಿದ್ದು ಯುವರಾಜ್ ಸಿಂಗ್ ನಾಯಕರ್ವದಯ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಅಖಾಡಕ್ಕೆ ಇಳಿಸಿದರೆ ಸಚಿನ್ ತೆಂಡೂಲ್ಕರ್ ನೇತೃತ್ವದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಕ್ರಿಕೆಟ್ ಆಟದಲ್ಲಿ ಹರ್ಭಜನ್ ಸಿಂಗ್, ಮುತ್ತಯ್ಯ ಮುರಳೀಧರನ್, ಆರ್.ಪಿ.ಸಿಂಗ್, ಎನ್.ವೆಂಕಟೇಶ ಪ್ರಸಾದ್, ಯುಸೂಪ್ ಪಠಾಣ್, ಇರ್ಪಾಣ್ ಪಠಾಣ್, ಪಾರ್ಥಿವ ಪಟೇಲ್ , ಮಹಮದ್ ಕೈಪ್ ಸೇರಿದಂತೆ ಮತ್ತಿತರರು ಪಾಲ್ಹೊಂಡಿದ್ದಾರೆ.
ಕ್ರೀಡಾಂಗಣ ಉದ್ಘಾಟನೆ ವೇಳೆ ಸದ್ಗುರು ಮಧುಸೂದನ್ ಸಾಯಿ, ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್, ರಾಜ್ಯ ಸರ್ಕಾರ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಮತ್ತಿತರು ಇದ್ದು ಕೃಷ್ಣ ಕ್ರೀಡಾಂಗಣ ತುಂಬ ಸಾಯಿ ಭಕ್ತರು, ಕ್ರೀಡಾ ಪ್ರೇಮಿಗಳು ತುಂಬಿದ್ದಾರೆ.