ಹಿರಿಯೂರು.ಜೂನ್ 30 : ಇಲ್ಲಿನ ನೃಪತುಂಗ ಬಡಾವಣೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಜುಲೈ 3ರಂದು ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಇದರ ಅಂಗವಾಗಿ ಜುಲೈ 2ರಂದು ಮಹಾ ಗಣಪತಿ ಹೋಮ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. 3ರ ಬೆಳಿಗ್ಗೆ5 ಐದು ಗಂಟೆಗೆ ಕಾಕಡಾರತಿ ನಂತರ ಭಜನೆ ಪಂಚಾಮೃತ ಅಭಿಷೇಕ ಕ್ಷೀರಾಭಿಷೇಕ ಮಹಾ ರುದ್ರಾಭಿಷೇಕ ನವಗ್ರಹ ಪೂಜೆ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನಂತರ ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಇರುತ್ತದೆಮಧ್ಯಾಹ್ನ 3 ಗಂಟೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪೂಜಾ ಸಮಿತಿ ಸದಸ್ಯರು ವಿನಂತಿಸಿದ್ದಾರೆ. ದೇವಸ್ಥಾನ ದಲ್ಲಿ ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ದುನಿ ಹಾಗೂ ಶಿರಡಿ ಸಾಯಿಬಾಬಾ ಸ್ವಾಮಿ ಯವರ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಪ್ರಗತಿ ಪಥದಲ್ಲಿದ್ದು ಭಕ್ತಾದಿಗಳು ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿರುತ್ತಾರೆ