ಸಾಯಿಬಾಬಾ ಭಕ್ತರಿಂದ ಕುಷ್ಟ ರೋಗಿಗಳಿಗೆ ನಿತ್ಯ ಊಟದ ವ್ಯವಸ್ಥೆ

ಬೀದರ:ಮೇ.26: ತಾಲ್ಲೂಕಿನ ಚಟ್ನಳ್ಳಿ ಸಮೀಪದ ಕುಷ್ಠರೋಗ ಕೇಂದ್ರದಲ್ಲಿ ಇರುವವರಿಗೆ ಸಾಯಿಬಾಬಾ ಸೇವಾ ಸಮಿತಿಯ ಭಕ್ತರು ನಿತ್ಯ ಊಟ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.

ಕೋವಿಡ್‌ ಸಂಕಷ್ಟದ ಕಾರಣ ಉಚಿತ ಊಟ ಹಾಗೂ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಲಾಕ್‍ಡೌನ್ ಮುಗಿಯುವವರೆಗೂ ಈ ವ್ಯವಸ್ಥೆ ಇರಲಿದೆ ಎಂದು ಸಾಯಿಬಾಬಾ ಸೇವಾ ಸಮಿತಿಯ ಅವಿನಾಶ ಪಾಟೀಲ ತಿಳಿಸಿದರು.

ಸಮಿತಿಯ ಚೇತನ್ ಜ್ಯಾಂತೆ, ಸುಮೀತ್ ಸೋಲಂಕೆ, ರಾಹುಲ್ ಬಿರಾದಾರ, ಮಹೇಶ ಕಾಮಶೆಟ್ಟಿ, ಕಿರಣ ಬಿರಾದಾರ ಇದ್ದರು.