ಸಾಯಿಬಾಬಾ ದರ್ಶನ ಪಡೆದ ಭಕ್ತರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.13: ಗುರು ಪೂರ್ಣಿಮೆಯ  ಅಂಗವಾಗಿ ಇಂದು ನಗರದ ಸಾಯಿಬಾಬ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದರ್ಶನ, ಭಜನೆ   ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಇಲ್ಲಿನ ವಿಶಾಲ ನಗರದಲ್ಲಿನ ಶಿರಿಡಿ ಸಾಯಿಬಾಬ ದೇವಸ್ಥಾನದಲ್ಲಿ ಇಂದು‌ ಬೆಳಗಿನ ಜಾವದಿಂದ ವಿಶೇಷ ಪೂಜೆ, ಆರತಿ, ಭಜನೆ, ದರ್ಶನ, ಪ್ರಸಾದ ವಿತರಣೆ ನಡೆಯಿತು.
ದೇವರ ದರ್ಶನಕ್ಕೆ ಜನರ ನೂಕು ನುಗ್ಗಲು ತಪ್ಪಿಸಲು,  ಬ್ಯಾರಿಕೇಡ್ , ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.
ಮೋಡ ಮುಸುಕಿದ, ಜಿನಿ, ಜಿನಿ ಮಳೆಯಲ್ಲಿಯೂ ನಗರದ ವಿವಿಧ ಪ್ರದೇಶದಿಂದ ಬಂದ ಜನ ದರ್ಶನ ಪಡೆದರು.
ಇದೇ ರೀತಿ ಕೋಟೆಪ್ರದೇಶ ಸೇರಿದಂತೆ ಹಲವಡೆ ಇರುವ ಸಾಯಿಬಾಬ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆ ದರ್ಶನ ಪ್ರಸಾದ ವಿತರಣೆ ವ್ಯವಸ್ಥೆ ಇತ್ತು.

Attachments area