ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ ನಿಂದ ಪವಿತ್ರ ಗೆ ಆರ್ಥಿಕ ನೆರವು

ರಾಯಚೂರು.ನ.೨೯-ಹುಟ್ಟಿನಿಂದಲೇ ನೂನ್ಯತೆ ಕಳೆದುಕೊಂಡು ಪವಿತ್ರ ಎಂಬ ಪುಟ್ಟ ಮಗು ೭೫ % ಮೆದುಳು ಕೆಲಸ ಮಾಡಲ್ಲ ತಂದೆ ತಾಯಿ ಇಲ್ಲದೆ ಅನಾಥವಾಗಿ ಬೆಳೆದ ಈ ಮಗು ವಯಸ್ಸಾದ ಅಜ್ಜ ಅಜ್ಜಿ ಜೊತೆಗೆ ಜೀವನ ಮಾಡುತ್ತಿದೆ ಈ ಮಗುವಿಗೆ ಸಾಯಿಬಾಬಾ ಮಂದಿರದಿಂದ ಆರ್ಥಿಕ ನೆರವು ನೀಡಲಾಗಿದೆ ಎಂದು ಸಾಯಿ ಮಂದಿರದ ಸಂಸ್ಥಾಪಕರಾದ ಸಾಯಿ ಕಿರಣ್ ಆದೋನಿ ಅವರು ಹೇಳಿದರು.
ಪಾಪಾ ವಯಸ್ಸಾದವರು ಅವರಿಗೂ ಪ್ಯಾರಲೆಸಿಸ್ ಆಗಿ ಬಡತನದಿಂದ ಬಳಲುತ್ತಿದ್ದಾರೆ ಈ ಮಗುವಿಗೆ ಆಸರೆ ಯಾಗಲೂ ನಾಲ್ಕನೇ ಸಾಯಿ ದೀಪಾವಳಿ ಪ್ರಯುಕ್ತ ಮಗುವಿಗೆ ಆರ್ಥಿಕ ನೆರವು ನೀಡಲು ನವಂಬರ್ ಒಂದನೇ ತಾರಿಖು ಆರ್ಥಿಕ ಸಹಾಯ ಎಂಬ ಅಭಿಯಾನ ಹಮ್ಮಿಕೊಂಡಿದ್ದೆವು ಅದರಿಂದ ಸಂಗ್ರಹ ವಾದ ಹಣವನ್ನ ಈ ಪುಟ್ಟ ಮಗುವಿಗೆ ನೀಡಿ ಸಾಯಿ ಬಾಬಾರ ಆಶಿರ್ವಾದದಿಂದ ಬೇಗ ಗುಣಮುಖರಾಗಲಿ ಎಂದು ಅವರು ಹೇಳಿದರು.
ಸಮಾಜದಲ್ಲಿ ಎಲ್ಲಿ ಬಡವರು ರೋಗದಿಂದ ಬಳಲುತ್ತಿದ್ದಾರೋ ಅಂತವರನ್ನ ನೋಡಿ ನನ್ನ ಮನಸ್ಸು ಕರಾಗುತ್ತದೆ ಹಾಗಾಗಿ ಸಾಯಿಮಂದಿರ ಈ ನಿರ್ಧಾರ ಮಾಡಿ ಒಂದು ಹೆಜ್ಜೆ ಮುಂದೆ ಬಂದಿದೆ ದಯಮಾಡಿ ನಾಡಿನ ಜನತೆ ರಾಯಚೂರಿನ ಗಣ್ಯರು ಎಲ್ಲಾರು ಮುಂದೆ ಬಂದು ಈ ಪುಟ್ಟ ಮಗುವಿಗೆ ಸಹಾಯ ಮಾಡುವುದರ ಮೂಲಕ ಮಾನವೀಯತೆ ಮೆರೆಯುವ. ಪುಟ್ಟ ಮಗುವಿನ ಬದುಕುವ ಕನಸು ನನಸು ಮಾಡುವ. ಈ ಮಗುವಿಗೆ ಒಂದು ಜೀವ ನೀಡಿ, ಬದುಕುವ ಜೀವ ನೀಡಿ, ಅವಳು ಎಲ್ಲರಂತೆ ಬದುಕಿ ಶಾಲೆಗೆ ಹೋಗಿ ಒಳ್ಳೆ ವಿದ್ಯಾವಂತಳಾಗಿ, ಈ ಸಮಾಜದಲ್ಲಿ ಬದುಕಬೇಕು. ಅವಳು ಬದುಕಲು ನಾಡಿನ ಜನತೆಗೆ ಮುಂದೆ ಬಂದು ಆರ್ಥಿಕ ಸಹಾಯ ಮಾಡಿ. ಕೆಳಗಿನ ಅಕೌಂಟ್ ನಂ ಗೆ ಫೆಡರಲ್ ಬ್ಯಾಂಕ್.
ಂಛಿ/ ೧೫೭೩೦೧೦೦೦೬೩೯೯೪
ಒiss Pಚಿviಣಡಿಚಿ
IಈSಅ :- ಈಆಖಐ೦೦೦೧೫೭೩
Phoಟಿe ಠಿಚಿಥಿ ಟಿo :- ೯೧೬೪೦೦೦೬೦೦ ಈ ಅಕೌಂಟಿಗೆ ಹಾಕುವ ಮೂಲಕ ಮಗುವನ್ನ ಉಳಿಸಿಕೊಳ್ಳುವ.ಸಾಯಿ ಮಂದಿರ ಇಲ್ಲಿವರೆಗೂ ಅಭಿಯಾನದಲ್ಲಿ ಜೋಡಿಸಿದ ಹಣ ೧೩,೦೦೦ ಸಾವಿರ ಸಾಯಿ ಚಾರಿಟೇಬಲ್ ಟ್ರಸ್ಟ್ ೨,೦೦೦ ಹಣ ಸೇರಿಸಿ ೧೫,೦೦೦ ಒಟ್ಟು ಮಾಡಿ ಇಲ್ಲಿಂದ ಆಸ್ಪತ್ರಗೆ ಹೋಗುವ ಖರ್ಚು ಆದರೂ ಆಗಲಿ ಮತ್ತು ಒಂದು ಇಂಜೆಕ್ಷನ್ ಬಂದರೂ ಎಷ್ಟೊ ಸಹಾಯವಾಗುತ್ತದೆ
ಎಂಬ ಕನಸಿನೊಂದಿಗೆ ಆರ್ಥಿಕ ಅಭಿಯಾನ ಶುರು ಮಾಡಿದ್ದೇವೆ ನಂತರ ಸಾಯಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪವಿತ್ರ ಎಂಬ ಮಗುವಿಗೆ ಪುಸ್ತಕಗಳು ಪೆನ್ನು ಅಕಾಡೆಮಿಕ್ ಗೆ ಬೇಕಾದ ಎಲ್ಲಾ ವಸ್ತುಗಳನ್ನ ನೀಡಿ ಅವರ ಅಜ್ಜ ಅಜ್ಜಿಗೆ ಒಂದು ಭರವಸೆ ನೀಡಿದ್ದಾರೆ. ನಿಮಗೆ ಮುಂದೆ ಏನೆ ಸಮಸ್ಯೆ ಆದರೂ ಈ ಮಗುವಿನ ವಿಷಯದಲ್ಲಿ ನಮ್ಮ ಸಾಯಿ ಚಾರಿಟೇಬಲ್ ಟ್ರಸ್ಟ್ ಯಾವತ್ತು ಜೊತೆಗೆ ಇರುತ್ತೆ ಮುಂದೆ ಯಾರಾದರೂ ಹಣ ಹಾಕಿದರೂ ನಿಮಗೆ ತಲುಪಿಸುತ್ತೇವೆ ಎಂದು ಸಾಯಿ ಕಿರಣ್ ಭರವಸೆ ನೀಡಿದರೂ.
ಈ ಸಂಧರ್ಭದಲ್ಲಿ ಸಿನಿಮಾ ನಟ ರಂಗ ನಿರ್ದೇಶಕ ಡಿಂಗ್ರಿ ನರೇಶ ಮಾತನಾಡಿ ಸಾಯಿ ಮಂದಿರ ಯಾವತ್ತು ಮಾನವೀಯ ಕೆಲಸಗಳಿಗೆ ಎತ್ತಿದ ಕೈ ಯಾವತ್ತು ಬಾಬಾರವರ ತತ್ವ ಸಿದ್ದಾಂತಗಳನ್ನ ಒಳಗೊಂಡು ಹೆಜ್ಜೆ ಹಾಕುತ್ತಿದೆ. ಸಾಯಿ ಮಂದಿರ ಈ ನಾಲ್ಕು ವರ್ಚದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನ ಮಾಡಿಕೊಂಡು ಬಂದಿದೆ, ನಾನು ಗಮನಿಸಿದ ಹಾಗೆ ಲಾಕ್ ಡೌನ್ ಸಂಧರ್ಭದಲ್ಲಿ ೨೫ ದಿನಗಳ ಕಾಲ ಸತತವಾಗಿ ಕೊವಿಡ್ ನಿಂದ ಬಳಲುವ ಜನರಿಗೆ ಮೂರೊತ್ತು ಅನ್ನಸಂತರ್ಪಣೆ ಮಾಡಿದ್ದು ಇಡೀ ರಾಜ್ಯದ ಜನತೆ ಮೆಚ್ವುವಂತ ಕೆಲಸ, ಹಾಗೆ ಪ್ರತಿ ಸಲ ಸಾಯಿ ದೀಪಾವಳಿ ಮೂಲಕ ಬಡವ ಬಲ್ಲಿದ ನಿರ್ಗತಿಕರಿಗೆ ಹಬ್ಬ ಆಚರಿಸಲು ಬೇಕಾದ ಪ್ರತಿ ಸಾಮಾಗ್ರಿಗಳನ್ನ ನಿಡಿ ಬಡವರ ಮನೆಯಲ್ಲಿ ದೀಪ ಹಚ್ಚಿ ಮನೆ ಬೆಳಗುವ ಕೆಲಸ ಮಾಡಿದೆ. ಹಾಗೆ ದಯಮಾಡಿ ರಾಯಚೂರಿನ ಜನ ರಾಜ್ಯದ ಜನ ಒಂದು ದಿನ ಪಾರ್ಟಿಲಿ ಖರ್ಚು ಮಾಡುವ ನಿಮ್ಮ ವ್ಯರ್ಥ ಹಣ ಈ ಮಗುವಿಗೆ ಸಹಾಯ ಮಾಡಿ, ಗೆಳೆಯರು ಸೇರಿ ಆರೋಗ್ಯ ಹಾಳು ಮಾಡಿಕೊಳ್ಳುವ ವ್ಯರ್ಥ ಪಾರ್ಟಿ ಹಣ ಮಗುವಿಗೆ ಹಾಕಿದರೇ ಎಷ್ಟೊ ಒಳ್ಳೆಯದು, ದೇವರನ್ನ ಈ ಮಗುವಿನಲ್ಲಿ ನೋಡಿ ತಿರುಪತಿಗೆ ಹೋಗಿ ಹಾಕುವುದಕ್ಕಿಂತ ಸಾಯಿ ಮಂದಿರಕ್ಕೆ ತಲುಪಿಸಿ ಆ ಮಗುವಿಗೆ ನಾವು ತಲುಪಿಸುತ್ತೆವೆ. ರಾಯಚೂರಿನಲ್ಲಿ ಸಾಕಷ್ಟು ಹಣವಂತರಿದ್ದಾರೆ ನಿವು ಮುಂದೆ ಬಂದು ನಾವು ಕೇವಲ ಹಣವಂತರಲ್ಲ ಮಾನವಂತರು ಅಂತ ಸಾಭಿತು ಮಾಡಿ. ಬೆಂಗಳೂರಿನ ನಾರಾಯಣ ಹೃದಯಾಲಯ ಕ್ಕೆ ಹೋಗುತ್ತಿದ್ದಾರೆ ದಯಾಮಾಡಿ ಮುಂದೆ ಬರಬೇಕು ವ್ಯರ್ಥವಾಗಿ ಕರ್ಚುಮಾಡುವ ಹಣ ಈ ಮಗುವಿನ ಜೀವ ಉಳಿಸಲು ಹಾಕಿ ಎಂದು ಡಿಂಗ್ರಿ ನರೇಶ ಹೇಳಿದರೂ. ಇಲ್ಲಿ ವರೆಗೂ ಮಗುವಿಗೆ ಹಣ ನೀಡಿ ಸಹಕರಿಸಿದ ಎಲ್ಲರಿಗೂ ಸಾಯಿ ಮಂದಿರದ ವತಿಯಿಂದ ತುಂಬು ಹೃದಯದ ಧನ್ಯವಾದಗಳು. ಈ ವೀಶೇಷ ಪವಿತ್ರ ದೈವಿಕ ಕಾರ್ಯಕ್ರಮಕ್ಕೆ ಚಲನ ಚಿತ್ರ ನಟ ಪುಟ್ ಪಾತ್ ೨ ಬೆಲ್ ಬಾಟಮ್ ಪುಟ್ಟರಾಜು ಲವರ್ ಆಪ್ ಶಶಿಕಲಾ, ಭಜರಂಗಿ ೨ ನಟರಾದ ಡಿಂಗ್ರಿ ನರೇಶ ಅವರ ಹಸ್ತದಿಂದ ಪವಿತ್ರ ಎಂಬ ಮಗುವಿಗೆ ಚೆಕ್ ನೀಡಲಾಯಿತು.. ಈ ಸಂಧರ್ಭದಲ್ಲಿ ಹಿರಿಯಿರಾದ ಸಾಯಿ ಮಂದಿರದ ಟ್ರಸ್ಟಿ ಈ ಶಂಕ್ರಣ್ಣ ಆದೋನಿ, ಹಾಗೂ ಮುನಿಯಪ್ಪ ಮೊಹನಪ್ಪ , ವಿದ್ಯಾರೆಡ್ಡಿ ಶಿಕ್ಷಕಿ, ಪಿ.ಕೆ.ಸುನಿಲ ಮತ್ತಿತ್ತರು ಇದ್ದರು.