ಸಾಯಿನಗರದ ಸಿಲಿಂಡರ್ ಸ್ಫೋಟವಾದ ಸ್ಥಳಕ್ಕೆ ಶಾಸಕರು ಬೇಟಿ

ಶಹಾಪುರ:ಮಾ.5: ಕೆಂಭಾವಿ ಪಟ್ಟಣದ ವಾರ್ಡ ನಂ-19 ಸಾಯಿನಗರದಲ್ಲಿನ ಶ್ರೀಮತಿ ಟಿ.ಕವಿತಾ ಮಧು ರವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ದುರಂತದಲ್ಲಿ ಮನೆ ಹಾಗೂ ಮನೆ ಒಳಗಿನ ವಸ್ತುಗಳಿಗೆ ಹಾನಿ ಆಗಿದ್ದು ಇಂದು ಮಾನ್ಯ ಶಹಾಪುರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ರವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸ್ವಾಂತನ ಹೇಳಿ ಆಥಿ9ಕ ನೇರವು ನೀಡಿದರು.
ನಂತರ ಮಾತನಾಡಿದ ಅವರು ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ ಜೊತೆಗೆ ದೂರವಾಣಿ ಮೂಲಕ ಮಾತನಾಡಿ 2021-22 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ಒಂದು ಆಶ್ರಯ ಮನೆಯನ್ನು ಮಂಜೂರು ಮಾಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ ಕೆಂಭಾವಿ, ವಾಮನರಾವು ದೇಶಪಾಂಡೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಡಿ ಪಾಟೀಲ,ರಂಗಪ್ಪ ವಡ್ಡರ, ಪುರಸಭೆ ಮಾಜಿ ಸದಸ್ಯ ಜಿವಿ.ಸತ್ಯನಾರಾಯಣ, ಟಿಎಚ್. ರಾಮಲಿಂಗೇಶ್ವರ ರಾವ್, ಸಿಎಚ್ ಬಾಪ್ಪಣ್ಣ, ಪಿ ವೆಂಕಟೇಶ್ವರ ರಾವ್ ಸೇರಿದಂತೆ ಉಪಸ್ಥಿತರಿದ್ದರು.