ಸಾಯಿಜ್ಞಾನ ಪಬ್ಲಿಕ್ ಸ್ಕೂಲ್‍ಗೆ ಶೇ 100 ಫಲಿತಾಂಶ

ಬೀದರ್:ಮೇ.18: ಇಲ್ಲಿಯ ಸಾಯಿಜ್ಞಾನ ಪಬ್ಲಿಕ್ ಸ್ಕೂಲ್ ಪ್ರಸಕ್ತ ಸಾಲಿನ ಸಿಬಿಎಸ್‍ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದೆ.

ಪರೀಕ್ಷೆ ಬರೆದ ಎಲ್ಲ 28 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 8 ಅಗ್ರಶ್ರೇಣಿ, 8 ಪ್ರಥಮ ದರ್ಜೆ, 10 ದ್ವಿತೀಯ ದರ್ಜೆ ಹಾಗೂ 2 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಸಾಯಿಜ್ಞಾನ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ರಮೇಶ ಕುಲಕರ್ಣಿ ತಿಳಿಸಿದ್ದಾರೆ.

ಗುಣಮಟ್ಟದ ಶಿಕ್ಷಣದ ಕಾರಣ ಶಾಲೆ ಸತತ ಮೂರನೇ ವರ್ಷವೂ ಶೇ 100ಕ್ಕೆ 100 ರಷ್ಟು ಫಲಿತಾಂಶ ದಾಖಲಿಸಿದೆ. ಚೈತನ್ಯ ಶೇ 85 ರಷ್ಟು ಅಂಕಗಳೊಂದಿಗೆ ಶಾಲೆಗೆ ಟಾಪರ್ ಆಗಿದ್ದಾರೆ. ಪ್ರಜ್ವಲ್, ಅನುಷ್ಕಾ, ಹಸ್ತಿ, ಹೇಮಾ, ಕೇಶವ, ಸಿದ್ಧೇಶ್ವರ ಅವರೂ ಅಗ್ರಶ್ರೇಣಿ ಉತ್ತೀರ್ಣರಾಗಿ ಸಾಧನೆ ತೋರಿದ್ದಾರೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶಾಲೆ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯೆ ತನುಜಾ ಆಣದೂರಕರ್ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.