ಸಾಯಿಕುಮಾರ ಶಿರ್ಕೆಗೆ ಸನ್ಮಾನ

ಚಿಟಗುಪ್ಪ:ನ.4: ಮೇರಿ ಮಾಟಿ ಮೇರಿ ದೇಶ್ ಯೋಜನೆಯ ಅಮೃತ ಕಳಶ ಯಾತ್ರಾ ಕಾರ್ಯಕ್ರಮ ದೆಹಲಿಯಲ್ಲಿ ಅಕ್ಟೋಬರ್ 30ರಿಂದ 31ರ ವರೆಗೆ ಹಮ್ಮಿಕೊಂಡಿರುವುದರಿಂದ ಪಟ್ಟಣದ ಪುರಸಭೆಯ ಅಮೃತ ಕಳಶವನ್ನು ದೆಹಲ್ಲಿಯಲ್ಲಿ ಹಮ್ಮಿಕೊಂಡಿರುವ ಅಮೃತ ವಾಟಿಕಾ ನಿರ್ಮಾಣ ಮಾಡುವ ಕಾರ್ಯಕ್ರಮದಲ್ಲಿ ನಮ್ಮ ಚಿಟಗುಪ್ಪ ಪಟ್ಟಣದ ಮಣ್ಣನ್ನು ಸಾಯಿಕುಮಾರ ಮಾರುತಿರಾವ ಶಿರ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಚಿಟಗುಪ್ಪ ಅವರನ್ನು ಅಕ್ಟೋಬರ್ 26 ರಂದು ಪಟ್ಟಣದಿಂದ ಅಮೃತ ಕಳಶಾವನ್ನು ತೆಗೆದುಕೊಂಡು ಅಕ್ಟೋಬರ್ 31ರಂದು ಹಮ್ಮಿಕೊಂಡಿರುವ ಅಮೃತ ವಾಟಿಕಾ ನಿರ್ಮಾಣ ಮಾಡಲು ಅಮೃತ ಕಳಶಾ ಕಳುಹಿಸಿದ್ದು ಸದರಿ ವಿದ್ಯಾರ್ಥಿಯು ದೆಹಲಿಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮೃತ ಕಳಶವನ್ನು ಯಶಸ್ವಿಯಾಗಿ ನೀಡಿ ಚಿಟಗುಪ್ಪಕ್ಕೆ ಹಿಂದಿರುಗಿದರಿಂದ ನವಂಬರ್ 3ರಂದು ಪುರಸಭೆಯ ಮುಖ್ಯಾಧಿಕಾರಿ ಹುಸಾಮುದ್ದಿನ್ ಬಾಬಾ ರವರು ಸಾಯಿಕುಮಾರ ಮಾರುತಿರಾವ ಶಿರ್ಕೆ ಇವರಿಗೆ ಶಾಲು ಹೊದಿಸಿ ಹೂವಿನ ಹಾರದಿಂದ ಸನ್ಮಾನಿಸಿದ್ದರು. ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿ ಪೂಜಾ ಪರಿಸರ ಅಭಿಯಂತರರು, ಹಾಗೂ ಸಿಬ್ಬಂದಿಗಳಾದ ವಿಜಯಕುಮಾರ ಕಂದಾಯ ಅಧಿಕಾರಿ, ವೈಶಾಲಿ ಕಿರಿಯ ಆರೋಗ್ಯ ನಿರೀಕ್ಷಕ, ಚಿದಾನಂದ, ಸಂತೋಷ ಬಿರಾದರ , ರಾಜಕುಮಾರ ಕರವಸೂಲಿಗಾರರು, ಬಸವರಾಜ, ಸಂತೋಷಕುಮಾರ ಜ್ಯೂನಿಯರ್ ಪೆÇ್ರೀಗ್ರಾಮರ್, ನಿತ್ಯಾನಂದ ನೊಡಲ್ ಇಂಜಿನಿಯರ್, ಸರೋಜನಿ, ಕವಿತಾ, ಮಲ್ಲಮ್ಮಾ, ಮಂಜುಳಾ, ನಥಾನಿಯೇಲ್, ಸಚಿನ, ರಾಜೇಶ್ ತೇಲಂಗ್, ಧನರಾಜ, ರವಿ ಶಾಖಾ ಉಪಸ್ಥಿತರಿದ್ದರು.