ಸಾಯಗಾಂವ ವಲಯಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳು

ಭಾಲ್ಕಿ :ಜು.29:ತಾಲೂಕಿನ ಸಾಯಗಾoವ ವಲಯಮಟ್ಟದ ಕ್ರೀಡಾಕೂಟ ಗುರುವಾರ [ಹಲ್ಸಿ ತುಗಾoವ] ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿತು. ವಲಯದ ವಿವಿಧ ಶಾಲಾ ಮಕ್ಕಳು ಭಾಗವಹಿಸಿದರು. ವಾಲಿಬಾಲ್ ಸ್ಪರ್ಧೆಯಲ್ಲಿ ಗ್ರಾಮೀಣ ಭಾಗದ ಶಾಲೆ ಶ್ರೀಮತಿ ಎಸ್. ಎಸ್. ಬಿ. ಪ್ರೌಢಶಾಲೆ ಕಾಸರತುಗಾವ ಮಕ್ಕಳು ಪ್ರಥಮ ಸ್ಥಾನ ಪಡೆದುಕೊಂಡಿದ್ದು .ಮಕ್ಕಳ ಸಾಧನೆಗೆ, ಕಲಿಸಿದ ಶಿಕ್ಷಕರಿಗೆ, ಮುಖ್ಯಗುರುಗಳಾದ ಮಲ್ಲಿಕಾರ್ಜುನ. ಎಸ್. ಪಾಟೀಲ್, ಪೆÇ್ರೀತ್ಸಾಹಿಸಿದ ಶಿಕ್ಷಕರಿಗೆ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಧ್ಯಕ್ಷರಾದ ಪರಮಪೂಜ್ಯ ಡಾ . ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿಗಳಾದ ಗುರುಬಸವ ಪಟ್ಟದ್ದೇವರು, ಆಡಳಿತಾಧಿಕಾರಿಗಳಾದ ಮೋಹನ್ ರೆಡ್ಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.