ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

ಅಥಣಿ : ಮಾ.17:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ಅಥಣಿ, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ತೀರ್ಥ ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ದರೂರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ತಾಲೂಕಿನ ತೀರ್ಥ ಗ್ರಾಮದ ಭಗವಾನ ಮಹಾವೀರ ಸಮುದಾಯ ಭವನದಲ್ಲಿ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ನದಿ ಇಂಗಳಗಾಂವ ಗ್ರಾಮದ ಸಿದ್ದಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಕ್ಕೆ ಸೇರಿ ಸದಸ್ಯರಲ್ಲಿ ಶಿಸ್ತು, ವ್ಯವಹಾರ ಜ್ಞಾನ, ಸಂಘಟನಾ ಶಕ್ತಿ ವೈಯಕ್ತಿಕ ಜೀವನದಲ್ಲಿ ಬದಲಾವಣೆಯಾಗಿ ಕುಟುಂಬಗಳು ಸರ್ವತೋಮುಖ ಅಭಿವೃದ್ಧಿಯತ್ತ ಸಾಗಿವೆ. ಇದು ಸಾಮಾಜಿಕ ಚಳುವಳಿಯಂತಿದೆ, ಬದಲಾಗುತ್ತಿರುವ ಇಂದಿನ ಸಮಾಜದಲ್ಲಿನ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಂತಹ ಧಾರ್ಮಿಕ ಕಾರ್ಯಕ್ರಮದಿಂದ ಹೊಸ ಬದಲಾವಣೆಯಾಗುತ್ತದೆ ನಾವೆಲ್ಲರೂ ಪೂಜೆಯನ್ನು ಮಾಡುವಾಗ ಭಾವ ಇರಬೇಕು ಸತ್ಯ ಶುದ್ಧವಾದ ಕಾಯಕವಿರಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ ಅಥಣಿ ಜಿಲ್ಲೆಯ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಮಾತನಾಡಿ ಧರ್ಮಸ್ಥಳ ಸಂಘವು 1982 ರಲ್ಲಿ ಪ್ರಾರಂಭಗೊಂಡು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ ಮುಂದುವರೆಸಿಕೊಂಡು ಬಂದಿದೆ. ಈ ಪೂಜಾ ಕಾರ್ಯಕ್ರಮವು ಜಾತಿ ಮತಭೇಧವಿಲ್ಲದೆ ನಾಡಿನ ಜನತೆಗೆ ಸಕಲ ಇಷ್ಟಾರ್ಥವನ್ನು ದಯಪಾಲಿಸುವಂತೆ ಅಥಣಿ ವಲಯದಲ್ಲಿ ಸುಮಾರು 14 ವರ್ಷಗಳಿಂದ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಮತ್ತು ಯೋಜನೆಯ ಸ್ವ-ಸಹಾಯ ಸಂಘಗಳ ಮೂಲಕ ಜನರಿಗೆ ಸುಲಭವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದರಿಂದ ಜನರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದರ ಜೊತೆಗೆ ಹೈನುಗಾರಿಕೆ,ಕೃಷಿ ಸಲಕರಣೆ, ವಾತ್ಸಲ್ಯ ಮನೆ,10ನೇ ತರಗತಿಯ ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಟ್ಯೂಷನ, ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ, ಜತೆಗೆ ಜನರ ಸ್ವಾವಲಂಭನೆ ಮತ್ತು ಅಭಿವೃದ್ಧಿಗೆ ವರದಾನವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ ಅಥಣಿ ಯೋಜನಾಧಿಕಾರಿ ರಜಬಅಲಿ ಮೇಲಿನಮನಿ ಸ್ವಾಗತಿಸಿದರು, ರೂಪಾ ಗಿರಿ ವಂದಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಸಮನ್ವಯ ಅಧಿಕಾರಿ ಆಶಾ ಭೋಗೂರ, ರಾಯಗೌಡ ಪಾಟೀಲ, ಬಸವರಾಜ ಹಣಗಂಡಿ, ರಾಜು ಪಾಟೀಲ, ಡಾ.ಅಶೋಕ್ ತೀರ್ಥ್, ಬಾಬಲಾಲ ನದಾಫ, ವಕೀಲರಾದ ವಿಜಯತೀರ್ಥ, ಮಹಾವೀರ ಮಾಂಗ, ಶ್ರೀಶೈಲ ಹವಾಲ್ದಾರ, ಸಂಗೀತ ಮಡಿವಾಳ, ಗೌರೀಶ ಹಿರೇಮಠ, ಈರಯ್ಯ ಮಠದ, ಕವಿತಾ ಕರೋಲಿ, ಸಾವಿತ್ರಿ ಅಂಬಿ, ಮಹದೇವಿ ಸನದಿ, ಅನಿತಾ ಬಿಳ್ಳೂರ, ಸೈಯದ್, ಲಕ್ಷ್ಮಿ ಠಕ್ಕನ್ನವರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು