ಸಾಮೂಹಿಕ ವಿವಾಹ

ಮಾಲೂರು, ಮಾ ೨೭- ತಾಲೂಕಿನ ಲಕ್ಕೂರು ಹೋಬಳಿಯ ಚಿಕ್ಕತಿರುಪತಿ ಗ್ರಾ.ಪಂ.ನ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷೆ ಸಪ್ತಪದಿ ಯೋಜನೆಯಡಿ ಕೋವಿಡ್ ಸೋಂಕಿನ ನಡುವೆ ಸರಳವಾಗಿ ಎರಡು ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು.
ರಾಜ್ಯ ಸರಕಾರ ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬಡವರ ಅನುಕೂಲಕ್ಕಾಗಿ ಸಪ್ತಪದಿ ಯೋಜನೆಯನ್ನು ಅನುಷ್ಟಾನಗೊಳಿಸಿದ್ದು, ಕೋವಿಡ್ ಸೋಂಕಿನ ಕಾರಣ ಸಾಮೂಹಿಕ ವಿವಾಹಗಳು ಮುಂದೂಡಲಾಗಿತ್ತು. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಸಾಮೂಹಿಕ ವಿವಾಹಗಳ ದಿನಾಂಕವನ್ನು ನಿಗಧಿಗೊಳಿಸಲಾಗಿತ್ತು, ದೇವಾಲಯದ ಆವರಣದಲ್ಲಿ ಶುಕ್ರವಾರ ಸಪ್ತಪದಿ ಯೋಜನೆಯ ಅಡಿ ಕೇವಲ ಎರಡು ಜೋಡಿಗಳು ಮಾತ್ರ ವಿವಾಹಕ್ಕೆ ನೊಂದಣೆ ಮಾಡಿಕೊಂಡಿದ್ದರು. ಅದರಂತೆ ಎರಡು ಜೋಡಿಗಳ ಮದುವೆ ನಡೆಯಿತು. ೨ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುಜರಾಯಿ ಇಲಾಖೆ ವತಿಯಿಂದ ವಧುವಿಗೆ ಮಾಂಗಲ್ಯಕ್ಕೆ ೪೦ ಸಾವಿರ ವಧುವಿನ ವಸ್ತ್ರಗಳಿಗೆ ೧೦ ಸಾವಿರ, ವರನ ವಸ್ತ್ರಗಳಿಗೆ ೫ ಸಾವಿರ ವಿತರಿಸಲಾಯಿತು. ವಧು ಹಾಗೂ ವರರ ಕುಟುಂಬದವರಿಗೆ ಊಟದ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ನರಸಿಂಹ ಮೂರ್ತಿ, ರವಿ, ಶ್ರೀಧರ್, ಗೋಪಾಲ ಭಾರದ್ವಜ್, ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷರಾದ ವೀರಭದ್ರಪ್ಪ, ನಂದನ್ ಕುಮಾರ್, ಮಾಜಿ ಸದಸ್ಯ ವೆಂಕಟೇಶಗೌಡ, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಟಿ.ಎನ್.ಮಂಜುಳ, ಇನ್ನಿತರರು ಹಾಜರಿದ್ದರು.