ಸಾಮೂಹಿಕ ವಿವಾಹ, ಉಪನಯನ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಫೆ9 : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಾರಥ್ಯದ ಕ್ಷಮತಾ ಸೇವಾ ಸಂಸ್ಥೆ ಹಾಗೂ ನವಯುಗ ಸಂಘಟನೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿ ಈ ವರ್ಷವೂ ಕೂಡಾ ಬೃಹತ್ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮವನ್ನು ಫೆ.18 ರಂದು ನಗರದ ಗೋಕುಲ್ ರಸ್ತೆಯ ಅಕ್ಷಯ್ ಪಾರ್ಕ್ ನ ಎದುರುಗಡೆ ಸಂತೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ನವಯುಗ ಸಂಘಟನೆಯ ಅಧ್ಯಕ್ಷರಾದ ಕೃಷ್ಣಾ ಗಂಡಗಾಳೇಕರ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 19 ಜೋಡಿಗಳು ಮದುವೆಗೆ ನೋಂದಣಿ ಮಾಡಿದ್ದು, 50 ಮದುವೆಯ ತಯಾರಿಯನ್ನು ಈಗಾಗಲೇ ಮಾಡಿಕೊಂಡಿದ್ದು, ಅಂದು ಬೆ.9 ಕ್ಕೆ ಉಪನಯನವನ್ನು ಮಾಡಲಿದ್ದು, ಮದುವೆಯ ಅಕ್ಷತೆಯ 12-25 ಕ್ಕೆ ಇದ್ದು, ಮದುವೆಗೆ ನೋಂದಣಿ ಮಾಡುವವರು ಫೆ.15 ರವರೆಗೂ ನೋಂದಣಿ ಮಾಡಿಕೊಳ್ಳಬಹುದು ಎಂದರು.

ಹೆಚ್ಚಿನ ಮಾಹಿತಿಗಾಗಿ 9449250081 ಅಥವಾ 7975155581 ಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅ ಶಿರಕೋಳ, ಪ್ರಕಾಶ ಕ್ಯಾರಕಟ್ಟಿ, ನಾಗರಾಜ್, ರವಿ ಬಂಕಾಪೂರ, ಅಭಿಲಾಷ್ ಉಪಸ್ಥಿತರಿದ್ದರು.