
ದೇವದುರ್ಗ,ಮಾ.೧೦- ಗಬ್ಬೂರು ಸಮೀಪದ ಸುಲ್ತಾನಪುರ ಶ್ರೀಪಂಚಾಕ್ಷರಿ ತೀರ್ಥ ಬೃಹನ್ಮಠದಲ್ಲಿ ಜಾತ್ರೆ ನಿಮಿತ್ತ ಆಯೋಜಿಸಿದ್ದ ಸಾಮೂಹಿಕ ವಿವಾಹ, ಧರ್ಮಸಭೆ ಹಾಗೂ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಸಮಾಜದಲ್ಲಿ ಮಠಗಳು ಕೇವಲ ಆಧ್ಯಾತ್ಮ ಬೋಧನೆಗೆ ಸೀಮಿತವಾಗಿಲ್ಲ. ಬಡತನ ನಿವಾರಣೆ, ಸಮಾಜಸೇವೆ, ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿವೆ. ಹಲವು ಮಠಗಳು ತ್ರಿವಿಧ ದಾಸೋಹ ಮಾಡುತ್ತಿವೆ. ಸರ್ಕಾರ ಮಾಡದಂಥ ಕೆಲಸವನ್ನು ಇಂದು ಮಠಗಳು ಮಾಡುತ್ತಿವೆ.
ಭಕ್ತರು ಹಾಗೂ ಬಡವರ ಮಕ್ಕಳಿಗಾಗಿ ಶಿಕ್ಷಣ, ವಸತಿ, ಅನ್ನದಾಸೋಹ ಮಾಡಿ ಅನಕ್ಷರತೆ, ಬಡತನ ಹೋಗಲಾಡಿಸಲು ಮುಂದಾಗಿವೆ. ಇಲ್ಲಿ ದಾಂಪತ್ಯ ಜೀವನದಲ್ಲಿ ಕಾಲಿಡುವ ಜೋಡಿಗಳು ಶ್ರೀಗಳ ಆಶೀರ್ವಾದ ಪಡೆದು ಆದರ್ಶ ಜೀವನ ನಡೆಸಬೇಕು. ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಜತೆಗೆ ಸಾಲಮಾಡುವುದು ತಪ್ಪಲಿದೆ. ಸುಲ್ತಾನಪುರ ಶ್ರೀಮಠ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಿದೆ. ಶ್ರೀಶಂಭುಸೋಮನಾಥ ಸ್ವಾಮೀಜಿ ಭಕ್ತರ ಪಾಲಿನ ನಗುಮುಖದ ಶಿವನಾಗಿದ್ದಾರೆ ಎಂದರು.
ಪೀಠಾಧಿಪತಿ ಶ್ರೀಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸೋಮವಾರಪೇಟೆ ಹಿರೇಮಠದ ಶ್ರೀರಾಚೋಟಿವೀರ ಶಿವಾಚಾರ್ಯ ಸ್ವಾಮಿಜಿ, ಕಿಲ್ಲೆ ಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರು ಸಂಸ್ಥಾನಮಠದ ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಜಾಗಟಗಲ್‌ನ ಶ್ರೀಬೆಟ್ಟದಯ್ಯ ತಾತ, ಶ್ರೀವಿರೂಪಾಕ್ಷಯ್ಯ ಸ್ವಾಮಿ, ನೀಲಗಲ್ ಶ್ರೀರೇಣುಕಾಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಶ್ರೀದೊಡ್ಡನಬಿಸಾಬ್ ಶರಣು, ಶ್ರೀಪಕೀರಸಾಬ್ ಶರಣರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ, ತಾಲೂಕು ಅಧ್ಯಕ್ಷ ಚಂದ್ರಶೇಖರಪ್ಪಗೌಡ ಮಿಯ್ಯಾಪುರ, ತಿಪ್ಪರಾಜು ಹವಾಲ್ದಾರ್, ಸಿದ್ದಯ್ಯತಾತ ಗುರುವಿನ ಇತರರಿದ್ದರು.