ಸಾಮೂಹಿಕ ವಿವಾಹಗಳಿಂದ ಸಮಾಜ ಪರಿವರ್ತನೆ

ಶಿರಹಟ್ಟಿ,ಏ25: ಸರ್ವಧರ್ಮಿಯರ ಸಹಭಾಗಿತ್ವದಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡುತ್ತವೆ ಎಂದು ಬಿರೇಶ್ವರ ಸೇವಾ ಸಮಿತಿ ಸಂಸ್ಥಾಪಕ ಮಂಜುನಾಥ ಘಂಟಿ ಹೇಳಿದರು.
ಸ್ಥಳೀಯ ಕುರುಬಗೇರಿ ಓಣಿಯ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಒಂದು ಬಸವ ಜಯಂತಿ ಅಂಗವಾಗಿ ನಡೆದ ಸಾಮೂಹಿಕ ವಿವಾಹಗಳ ನೇತೃತ್ವ ವಹಿಸಿ ಮಾತನಾಡಿದ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳು ಸೌಹಾರ್ದ ಕೇಂದ್ರಗಳಾಗಿ ಪರಿವರ್ತನೆ ಯಾಗಬೇಕಾದರೆ ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಎಲ್ಲಾ ಆಶ್ರಮಗಳಿಗಿಂತ ಗ್ರಹಸ್ಥಾಶ್ರಮ ಶ್ರೇಷ್ಠ. ಮದುವೆ ಎಂಬುದು ಕೇವಲ ಎರಡು ದೇಹಗಳ ಸಮ್ಮಿಲನ ಅಲ್ಲ. ಅದು ಎರಡು ಹೃದಯ ಬೆಸೆಯುವ ಪವಿತ್ರವಾದ ಜೀವನ ಪದ್ಧತಿ. ಸತಿ-ಪತಿಗಳು ಹೊಂದಾಣಿಕೆಯಿಂದ ಜೀವನ ಬಂಡಿ ಸಾಗಿಸಬೇಕು. ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು, ಕೀಳೆನ್ನದೆ ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಇಂತಹ ಸತ್ಕಾರ್ಯಗಳನ್ನು ನಡೆಸಿದರೆ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ತಾಲ್ಲೂಕಾಧ್ಯಕ್ಷ ದೇವಪ್ಪ ಬಟ್ಟೂರ, ರಾಮಣ್ಣ ಡಂಬಳ, ಎನ್.ವೈ.ಕರಿಗಾರ, ಕರಿಯಪ್ಪ ಕುಳಗೇರಿ, ರಾಮಣ್ಣ ಕಟ್ಟೆಕಾರ, ಮಂಜಪ್ಪ ಹಮ್ಮಿಗಿ, ಮಂಜಪ್ಪ ಕಟ್ಟೆಕಾರ, ಆನಂದ ಸ್ವಾಮಿ, ಶಿವಣ್ಣ ಕರಿಗಾರ, ಕರಿಯಪ್ಪ ಬಟ್ಟೂರ ಇದ್ದರು.