ಸಾಮೂಹಿಕ ಯೋಗಾಭ್ಯಾಸ


ಹುಬ್ಬಳ್ಳಿ, ಜೂ21: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ, ಯೋಗಮಯಂ ಯೋಗ ಸಾಧನ ಕೇಂದ್ರ ಧಾರವಾಡ ಹಾಗೂ ಮಹಾತ್ಮ ಬಸವೇಶ್ವರನಗರ ಅಭಿವೃದ್ಧಿ ವೇದಿಕೆ ಇವರ ಸಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಾಮೂಹಿಕ ಯೋಗಭ್ಯಾಸ ಕಾರ್ಯಕ್ರಮವನ್ನು, ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾಂತ ಕಾರ್ಯಕಾರಿಣಿ ಸದಸ್ಯರು, ಹಾಗೂ ಹಿರಿಯರಾದ ಶ್ರೀಧರ ಜಿ ನಾಡಗೇರರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗಭ್ಯಾಸದಲ್ಲಿ ಭಾರತವು ಮೊದಲ ಸ್ಥಾನ ಪಡೆದುಕೊಂಡಿದೆ. ಭಾರತವು ವಿಶ್ವಗುರು ಆಗಬೇಕೆಂದರೆ, ದೇಶದ ಪ್ರತಿಯೊಬ್ಬ ನಾಗರಿಕನು ಸಹ ಆರೋಗ್ಯದಿಂದಿರಬೇಕು. ಯೋಗಭ್ಯಾಸವನ್ನು ಮಾಡುವ ಮೂಲಕ ಅನಾರೋಗ್ಯವನ್ನು ದೂರ ಮಾಡಿಕೊಳ್ಳಬೇಕು ಎಂಬ ಕರೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಮಹಾಪೌರರಾದ ಈರೇಶ ಅಂಚಟಗೇರಿ ರವರು ಮಾತನಾಡಿ, ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಾಡುವ ಮೂಲಕ, ದೇಶದ ಪ್ರತಿಯೊಬ್ಬ ನಾಗರಿಕರು ಸಹ ಯೋಗವನ್ನು ಮಾಡಲು ಪ್ರೇರೇಪಣೆ ನೀಡಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು. ಮತ್ತು ಸಾಮೂಹಿಕ ಯೋಗವನ್ನು ಮಾಡುವ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕರು ಸಹ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಕರೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾತ್ಮ ಬಸವೇಶ್ವರನಗರ ಅಭಿವೃದ್ಧಿ ವೇದಿಕೆಯ ಅಧ್ಯಕ್ಷರು, ಖ್ಯಾತ ವೈದ್ಯರು, ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್ ಆರ್ ರಾಮನಗೌಡರರವರು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಕಾಶಪ್ಪ ದೊಡ್ಡವಾಡ, ಸಿ. ಎಸ್. ಪಾಟೀಲ, ಬಸವರಾಜ ಕಡಕೋಳ, ಲಕ್ಷ್ಮಣ ಬೋಡಕೆ, ಅಶ್ವಿನ್ ಪಟೇಲ್, ನರೇಂದ್ರ ಪಟೇಲ್, ಜಗದೀಶ ಶಾ, ಸುರೇಶ ಹೆಗಡೆ ಹಾಗೂ ಅನೇಕ ಯೋಗ ಪಟುಗಳು, ಮಹಾತ್ಮ ಬಸವೇಶ್ವರನಗರದ ಗುರುಹಿರಿಯರು ಉಪಸ್ಥಿತರಿದ್ದರು.