ಸಾಮೂಹಿಕ ಪುಷ್ಪಾರ್ಚನೆಯಿಂದ ಮನ ಪರಿಶುದ್ಧವಾಗುವುದು:ಡಾ. ರಾಜಶೇಖರ ಶಿವಾಚಾರ್ಯರು

ಬೀದರ:ನ.13:ಶಿವನಿಗೆ ಬಿಲ್ವ ಪತ್ತೆ ಇಷ್ಟವಾಗಿರುವಂತೆ. ಜಗಜ್ಜನನಿ ಭವಾನಿ ಮಾಣeಗೆ ಪುಷ್ಪಾರ್ಚನೆ ಅತ್ಯಂತ್ಯಪ್ರೀಯವಾಗಿದೆ ಎಂದು ಬೇಮಳಖೇಡ ಹಿರೇಮಠ ಸಂಸ್ಥಾನದ ಪಟ್ಟಾಧ್ಯಕ್ಷರಾದ ಶ್ರೀ ಷ.ಬ್ರ, ಡಾ|| ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ತಾಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಶ್ರೀ ಭವಾನಿ ಮಾತೆಯ ಪ್ರಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ಲಕ್ಷ ಪುಷ್ಪಾರ್ಚನೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ಬಿಲ್ವಾರ್ಚನೆ ಮತ್ತು ಪುಷ್ಪಾರ್ಚನೆಯು ನಮ್ಮ ಹಿಂದು ಸಂಸ್ಕøತಿಯ ಶ್ರೇಷ್ಠ ಪೂಜಾ ವಿಧಾನಗಳಾಗಿವೆ. ಹಿಂದು ಧಾರ್ಮಿಕ ಪೂಜಾ ಪರಂಪರೆಯಲ್ಲಿ ರುದ್ರಾಭಿಷೇಕದಂತೆ ಬಿಲ್ವ ಪತ್ರ, ತುಳಸಿ, ಗರಿಕೆ, ಪುಷ್ಪ ಮುಂತಾದವುಗಳು ಪ್ರಮುಖ ಅರ್ಚನೆಗಳಾಗಿದ್ದು, ಇವು ನೈವೇದ್ಯದಷ್ಟೇ ಮನ್ನಣೆಯನ್ನು ಪಡೆದುಕೊಂಡಿವೆ. ಶಿವನಿಗೆ ಬಿಲ್ವಪತ್ರೆ, ಗಣಪತಿಗೆ ಕರಿಕೆ, ವಿಷ್ಣುವಿಗೆ ತುಲಸಿ, ಮಹಾಲಕ್ಷ್ಮೀಗೆ ಕಮಲ, ಅನ್ನಪೂರ್ಣೆಗೆ ಅಕ್ಕಿ ಪ್ರೀಯವಾಗಿರುವಂತೆ ಆದಿಶಕ್ತಿ ಲೋಕ ಮಾತೆಯಾದ ಪಾರ್ವತಿ ಅಥವಾ ದುರ್ಗಾ ಭವಾನಿ ಮಾತೆಗೆ ಕುಂಕಮದ ಜೊತೆಗೆ ಪುಷ್ಪಾರ್ಚನೆಯು ಅತ್ಯಂತ ಪ್ರೀಯವಾದ ಅರ್ಚನೆಯಾಗಿದೆ.

ಭಕ್ತರು ತಮಗಿಷ್ಟವಾದ ಈ ದೇವ ದೇವತೆಗಳಿಗೆ ಆಯಾಯ ಅರ್ಚನೆಗಳಿಂದ ಶ್ರೆದ್ಧಾ ಭಕ್ತಿಗಳಿಂದ ಪೂಜಾ ಅರ್ಚನೆಗಳನ್ನು ನೆರವೇರಿಸಿದರೆ ಆಯಾ ದೇವತೆಗಳು ಸಂತೃಪ್ತಗೊಂಡು ಬೇಡಿದ ವರಗಳನ್ನು ಕೊಡುವರೆಂದು ಧರ್ಮ ಗ್ರಂಥಗಳು ಉಗ್ಗಡಿಸುತ್ತವೆ.

ಅದರಂತೆ ಭಕ್ತರು ಪೂಜಾ ಸೇವೆಯನ್ನು ಮಾಡಿ ಫಲಗಳನ್ನು ಹೊಂದುರುತ್ತಾರೆ. ವರ್ತಮಾನದ ದೇಶದಲ್ಲಿ ವಿನಾಕಾರಣ ಆರೋಗ್ಯಪೂರ್ಣ ಸಮಾಜದಲ್ಲಿ ಜಾತಿ, ಧರ್ಮ, ಭಾಷಾ, ಸಂಸ್ಕøತಿಗಳ ಹಿನ್ನೆಲೆಯಲ್ಲಿ ಕೋಮಸದ್ಭಾವ ವಿಘಟಿತವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದು ಮೊದಲು ನಗರ ಪಟ್ಟಗಳಿಗೆ ಸೀಮಿತವಾಗಿದ್ದರೆ ಈಗ ಅದು ಹಳ್ಳಿ ಹಳ್ಳಿಗಳಲ್ಲಿ ಹರಡುತ್ತಿದೆ. ಈ ಕಲಷಿತ ವಾತಾವರಣವು ತಿಳಿಯಾಗಬೇಕಾದರೆ ಇಂತಹ ಸಾಮೂಹಿಕ ಲಕ್ಷ ಪುಷ್ಪಾರ್ಚನೆಯಂತಹ ಕಾರ್ಯಗಳಿಂದ ಖಂಡಿತ ಸಾಧ್ಯವಾಗುವುದು. ಆದಕ್ಕಾಗಿ ದೇಶದ ಪ್ರತಿ ಹಳ್ಳಿಗಳಲ್ಲಿ ಎಲ್ಲರನ್ನೂ ಒಂದು ಕಡೆಗೆ ಸೇರಿಸುವಂತೆ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತಾಗಬೇಕು. ಸಾಮೂಹಿಕ ಪುಷ್ಪಾರ್ಚನೆಯಿಂದ ದ್ವೇಷ ಭಾವ ಅಳಿದು ಸದ್ಭಾವನೆ ತುಂಬಿ ಬರುತ್ತದೆ ಎಂದು ಶ್ರೀಗಳು ಹೇಳಿದರು.

ಸಾಮೂಹಿಕ ಪುಷ್ಪಾರ್ಚನೆಯಲ್ಲಿ ನಿರೀಕ್ಷೆಗೆ ಮೀರಿ ಭಕ್ತರು ಪಾಲ್ಗೊಂಡಿದ್ದರಿಂದ ನಮ್ಮ ಸಂಕಲ್ಪಕ್ಕಿಂತ ಎರಡು ಪಟ್ಟು ಹೆಚ್ಚಾಗಿದ್ದುದು ಒಂದು ದಾಖಲೆಯಾಗಿದೆ. ಭವಾನಿ ಮಾತೆಗೆ ಸುಮಾರು 2 ಲಕ್ಷ 50 ಸಾವಿರಕ್ಕಿಂತ ಅಧಿಕ ಪುಷ್ಪಗಳು ಅರ್ಪಿತವಾಗಿದ್ದು ಈ ವರೆಗಿನ ಒಂದು ವಿನೂತನ ದಾಖಲೆಯಾಗಿದೆ.

‘ಬಾಲವಾಗ್ಮಿ’ ಕು. ಹರಿಕಾ ಬೆಂಗಳೂರು, ಜಾತ್ರಾ ಸಂಚಾಲಕರಾದ ಚನ್ನಪ್ಪಾ ಗೌರಶೆಟ್ಟಿ, ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ದತ್ತಾತ್ರಿ ಲಕ್ಕಾ, ವೈಜಿನಾಥ ಹಲಬಹರ್ಗೆ, ಕಾಶಿನಾಥ ಗೌರಶೆಟ್ಟಿ, ಅಶೋಕ ಮೇತ್ರೆ, ಕಾಶಿನಾಥ ಪಿಳ್ಳೆ, ವೈಜಿನಾಥ ಮೇತ್ರೆ, ಚಂದ್ರಕಾಂತ ಪಿಳ್ಳೆ, ದಯಾನಂದ ಸ್ವಾಮಿ ಮುಂತಾದ ಗಣ್ಯರು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇದ್ದರು.