ಸಾಮೂಹಿಕ ಉಪನಯನ

ಮುನವಳ್ಳಿ,ಮೇ23: ಪಟ್ಟಣದ ವಿಠ್ಠಲ ಮಂದಿರದಲ್ಲಿ ಸೋಮವಾರ ಶ್ರೀ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಸಮಾಜ ಬಾಂದವರ 14 ಮಕ್ಕಳ ಉಚಿತ ಸಾಮೂಹಿಕ ಉಪನಯನ ಜರುಗಿತು.
ಸವದತ್ತಿಯ ಗುರ್ಲಹೊಸುರಿನ ರಾಜಾರಾಮ ಮಠದ ಶ್ರೀ ಸದಾನಂದ ದಿಕ್ಷಿತರು ಹಾಗೂ ಅವರ ಶಿಷ್ಯಂದಿರ ಸಮ್ಮುಖದಲ್ಲಿ ಉಪನಯನ ಕಾರ್ಯಕ್ರಮ ಜರುಗಿತು.
ಜಣಾರ್ಧನ ಅಮಠೆ, ವೆಂಕಟೇಶ ಅಮಠೆ, ಜ್ಞಾನೇಶ್ವರ ತೇಲಕರ, ಅಪ್ಪು ಅಮಠೆ, ಸೋಮಶೇಖರ ಯಲಿಗಾರ, ಗೋಪಾಲ ನವಲೆ, ಮನೋಹರ ಅಮಠೆ, ಮಾರುತಿ ರಾಸನಕರ, ಶಂಕರ ಸುಲಾಖೆ, ಮಹಿಳಾ ಸಂಘದವರು ಇತರರು ಉಪಸ್ಥಿತರಿದ್ದರು.
ಮಹಾ ಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಳವಾಯಿತು.