
ತಾಳಿಕೋಟೆ:ಸೆ.19: ಜಗತ್ತು, ದೇಹ, ಒಂದು ಆತ್ಮ ಇದ್ದಂತೆ ಸೂರ್ಯೋದಯ ಸಮಯದಲ್ಲಿ ಇಷ್ಟಲಿಂಗಪೂಜೆಗೆ ಮುಂದಾದರೆ ಏಕಾಗ್ರತೆ ಎಂಬುದು ಮೂಡಿಬಂದು ಮನದಿಚ್ಚೆಯನ್ನು ನೇರವೇರಿಸಿಕೊಳ್ಳಲು ಸಾಧ್ಯವೆಂದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ನುಡಿದರು.
ರವಿವಾರರಂದು ಶ್ರೀ ಖಾಸ್ಗತೇಶ್ವರ ಮಠದಲ್ಲಿ ಶ್ರಾವಣಮಾಸದ ನಿಮಿತ್ಯ ಶ್ರೀ ಖಾಸ್ಗತ ಮಹಿಳಾ ಭಜನಾ ಮಂಡಳಿಯವರ ವತಿಯಿಂದ ತಿಂಗಳ ಪರ್ಯಂತ ಸಾಗಿಬಂದ ಮಹಾ ಭಜನಾ ಕಾರ್ಯಕ್ರಮವನ್ನು ಸಾಮೂಹಿಕ ಇಷ್ಟಲಿಂಗಾರ್ಚನೆ ಮಹಾ ಪೂಜೆ ಯೊಂದಿಗೆ ಏರ್ಪಡಿಸಲಾದ ಮಹಾ ಮಂಗಲೋತ್ಸವ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು ಆತ್ಮ ಪರಮಾತ್ಮ ಎಂಬುದಕ್ಕೆ ಬಹಳೇ ಸಂಬಂದವಿದೆ ಎಂದ ಶ್ರೀಗಳು ನೇರದೃಷ್ಠಿಯೊಂದಿಗೆ ಏಕಾಗ್ರತೆ ತನದಿಂದ ಉಂಗುರದ ಬೆರಳನ್ನು ಮಡಚಿ ಲಿಂಗದ ಕಡೆಗೆ ದೃಷ್ಠಿ ಇಟ್ಟರೆ ಮನಸ್ಸಿನಲ್ಲಿ ಶಕ್ತಿ ತುಂಬಿದರೆ ಚೈತನ್ಯವೆಂಬುದು ಸೃಷ್ಠಿಯಾಗಲಿದೆ ಎಂದ ಶ್ರೀಗಳು ಲಿಂಗಪೂಜೆ ಇದು ಆದಿಕಾಲದ್ದು ಆಗಿದ್ದು ಬಸವಣ್ಣನವರ ಅಕ್ಕಮಹಾದೇವಿತಾಯಿಯವರು ಇಂತಹ ಮಹಾ ಪೂಜೆಯಿಂದಲೇ ಕೂಡಲ ಸಂಗಮನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರಿಂದ ಇಂದಿಗೂ ಅವರ ಹೆಸರು ಅಜರಾಮರವಾಗಿ ಉಳಿಯಲು ಕಾರಣವಾಗಿದೆ ಎಂದು 12ನೇ ಶತಮಾನದಲ್ಲಿ ನಡೆಯುತ್ತಿದ್ದ ಸಾಮೂಹಿಕ ಇಷ್ಟಲಿಂಗ ಪೂಜಾ ಕುರಿತು ತಿಳಿ ಹೇಳಿದರು.
ಕಾರ್ಯಕ್ರಮದ ಮೊದಲಿಗೆ ಶ್ರೀ ಖಾಸ್ಗತೇಶ್ವರರ ಹಾಗೂ ವಿರಕ್ತಶ್ರೀಗಳ ಗದ್ದುಗೆಗಳಿಗೆ ಮಹಾಭಿಷೇಕ, ಬಿಲವಾರ್ಚನೆ, ಪುಷ್ಪಾರ್ಚನೆ, ಹಾಗೂ ಮಹಾ ಮಂಗಳಾರತಿ ಜರುಗಿತಲ್ಲದೇ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯನಿಯರು ಸಾಮೂಹಿಕ ಲಿಂಗಪೂಜೆಯನ್ನು ನೆರವೇರಿಸಿದರು.
ಈ ಲಿಂಗಪೂಜಾ ಕಾರ್ಯಕ್ರಮ ಕುರಿತು ವೇ.ವಿಶ್ವನಾಥ ವಿರಕ್ತಮಠ, ವೇ.ಆದಯ್ಯ ಹಿರೇಮಠ, ವೇ.ಆಕಾಶ ಹಿರೇಮಠ ಅವರು ಮಾಹಿತಿ ನೀಡುವದರೊಂದಿಗೆ ಕಾರ್ಯಕ್ರಮ ನೆರವೇರಿಸಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಹಿಳಾ ಭಜನಾ ಮಂಡಳಿಯ ಅಕ್ಕಮಹಾದೇವಿ ವಿರಕ್ತಮಠ, ವಿಧ್ಯಾವತಿ ವಿರಕ್ತಮಠ, ಹಾಗೂ ಸಾವಿತ್ರೇಮ್ಮ ಹಿರೇಮಠ, ಪಾರ್ವತಿ ಬಾಗೇವಾಡಿ, ಶಾರದಾ ಹಿರೇಮಠ, ಸುಮಾ ಹಿರೇಮಠ, ಬಸಮ್ಮ ಹಿರೇಮಠ, ರುದ್ರಮ್ಮ ಬಿಳೇಭಾವಿ, ಗೌರಮ್ಮ ಕುಂಭಾರ, ನಿರ್ಮಲಾ ಕಕ್ಕೇರಿ, ಕಾಶಿಬಾಯಿ ಪಾಟೀಲ, ಸಂಗೀತಾ ಪಾಟೀಲ, ಭೀಮಾಬಾಯಿ ಕೋರಿ, ದ್ರಾಕ್ಷಾಯಿಣಿ ಜೀನಾ, ಪ್ರಭಾವತಿ ಕೊಣ್ಣೂರ, ವಿಜಯಲಕ್ಷ್ಮೀ ಪಾಟೀಲ, ನಿರ್ಮಲಾ, ಶಾರದಾ ವಿಜಾಪೂರ, ಪದ್ಮಾ ಶಾಹಾಪೂರ, ಹಾಗೂ ಶಿವಾನಂದ ಹಿರೇಮಠ, ಬಸವರಾಜ ಬಾಗೇವಾಡಿ ಮೊದಲಾದವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀಮತಿ ಜ್ಯೋತಿ ಹಿರೇಮಠ ಸ್ವಾಗತಿಸಿ ವಂದಿಸಿದರು. ಮಹಾ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.