ಸಾಮೂಹಿಕ ಆನೆಕಾಲು ಮಾತ್ರೆ ಸೇವನೆ

(ಸಂಜೆವಾಣಿ ವಾರ್ತೆ)
ಔರಾದ :ಆ.25: ಆನೆಕಾಲು ರೋಗವನ್ನು ಭಯಪಡದೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಡಿಇಸಿ ಅಲ್ಬೆಂಡಜೋಲ್ ಮತ್ತು ಐವರ್‍ಮೆಕ್ಟೀನ್ ಗುಳಿಗೆಗಳ ಸೇವನೆಯಿಂದ ಆನೆಕಾಲು ರೋಗ ವಾಸಿಯಾಗುತ್ತದೆ ಎಂದು ಎಕಲಾರ ಉಪ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಡಾ. ಸಂಜೀವಕುಮಾರ ಹೇಳಿದರು.
ತಾಲ್ಲೂಕಿನ ಎಕಲಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆನೆಕಾಲು ರೋಗವು ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ ಮಾತ್ರೆಗಳನ್ನು ಕಡ್ಡಾಯವಾಗಿ ಸೇವಿಸಬೇಕು. ಮಾತ್ರೆಗಳನ್ನು ನುಂಗುವುದರಿಂದ ನಮ್ಮ ದೇಹದಲ್ಲಿ ಇದ್ದ ರೋಗ ತರುವ ಮೈಕ್ರೋಫೈಲೇರಿಯಾ ರೋಗಾಣುಗಳು ಸತ್ತು ಮುಂದೆ ನಮಗೆ ಆನೆಕಾಲು ರೋಗ ಬಾರದಂತೆ ತಡೆಯುತ್ತದೆ. ಮಾತ್ರೆಗಳನ್ನು ಖಾಲಿ ಹೊಟ್ಟೆಯಿಂದ ಮಾತ್ರೆ ಸೇವಿಸದೆ ಊಟೋಪಹಾರ ಸೇವನೆಯ ನಂತರ ಈ ಮಾತ್ರೆ ಸೇವಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಡ್ಯಾನಿಯಲ್, ಶಾಲೆಯ ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಬಾಲಾಜಿ ಅಮರವಾಡಿ, ಜೈಸಿಂಗ್ ರಾಠೋಡ್, ವಿರಶಟ್ಟಿ ಗಾದಗೆ, ಅಂಕುಶ್ ಪಾಟೀಲ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.