ಸಾಮಾನ್ಯ ಸಭೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ನ.14: ಪಟ್ಟಣದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಗೆ ಕಾಂಗ್ರೆಸ್ ಸದಸ್ಯರ ಗೈರು ಹಾಜರಿ.
ಇಂದು ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ 16 ಟೆಂಡರ್ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು.  ಈ ಹದಿನಾರು ಕಾಮಗಾರಿಗಳಿಗೆ  ಸುಮಾರು ಒಂದು ಕೋಟಿ ಅನುದಾನ ಮಂಜೂರು ಆಗಿದ್ದು, ಚರಂಡಿ, ರಸ್ತೆ, ಡಕ್ ಅಭಿವೃದ್ಧಿ ಗಾಗಿ ವಿನಿಯೋಗಿಸುವ ಬಗ್ಗೆ ಚರ್ಚೆ ಯಾಯಿತು.
ಈ ಸಾಮಾನ್ಯ ಸಭೆಯಲ್ಲಿ  ಆರು ಜನ ಕಾಂಗ್ರೆಸ್ ಸದಸ್ಯ ಗೈರು ಹಾಜರಿ ಕಂಡು ಬಂದಿತು. ಈ ಸಭೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಟಿ. ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.