
ಮಾನ್ವಿ,ಫೆ.೨೩- ಪುರಸಭೆ ಇಲಾಖೆಯ ಅನುದಾನದಡಿಯಲ್ಲಿ ನಡೆಯುವ ಯಾವುದೇ ಕಾಮಗಾರಿಗಳ ಕಡತಗಳನ್ನು ಕಡ್ಡಾಯವಾಗಿ ಸಾಮಾನ್ಯ ಸಭೆಯಲ್ಲಿ ಇರತಕ್ಕದ್ದು ಹಾಗೂ ಅದರ ಸದರಿ ಸಂಪೂರ್ಣ ವಿವರಣೆಯನ್ನು ನೀಡಬೇಕು ಎಂದು ಎಲ್ಲ ಹಿರಿಯ ಪುರಸಭೆ ಸದಸ್ಯರು ಪುರಸಭೆ ಅಧಿಕಾರಿಗೆ ಮಾಹಿತಿ ಕೇಳಲಾಯಿತು ಅದಕ್ಕೆ ಪ್ರತ್ಯರವಾಗಿ ನಮ್ಮ ಇಲಾಖೆಯ ಸಹಾಯಕ ಅಧಿಕಾರಿಗಳ ನಿರ್ಲಕ್ಷ್ಯದ ಲೋಪದೋಷಸಿದಾಗಿ ಸಭೆಗೆ ತರುವುದಕ್ಕೆ ಆಗಿಲ್ಲ ಆದರಿಂದ ತಮ್ಮಲ್ಲಿ ಕ್ಷೇಮೆ ಕೇಳುತ್ತೇನೆ ಎಂದು ಒಪ್ಪಿಕೊಂಡರು.
ಪಟ್ಟಣದ ಪುರಸಭೆಯ ಇಲಾಖೆಯಿಂದ ನಗರ ಅಭಿವೃದ್ಧಿ ಹಾಗೂ ಕಾಮಗಾರಿಗಳ ಕುರಿತು ಸರ್ವ ಸದಸ್ಯರ ಸಮ್ಮುಖದಲ್ಲಿ ಸಾಮಾನ್ಯ ಸಭೆ ಹಾಗೂ ವಿಷಯ ಆಧಾರಿತ ಚರ್ಚೆ ಮಾಡಲಾಯಿತು.. ನಂತರ ವಿವಿಧ ವಾರ್ಡಿಗಳಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಮತ್ತು ನಿಗಧಿ ಮಾಡಿರುವ ಕಾಮಗಾರಿಗಳ ವಿವರಗಳ ಕುರಿತು ಚರ್ಚೆ ವಾದ ವಿವಾದಗಳು ನಡೆದವು.
ಪ್ರಮುಖವಾಗಿ ಸಿಸಿ ರಸ್ತೆ, ಹೈ ಮಾಸ್ ದೀಪದ ಕಂಬಗಳು,ಚರಂಡಿ,ಸ್ವಚ್ಚತೆ,ಕುಡಿಯುವ ನೀರಿನ ಪೈಪ್ ಲೈನ್,ಬೋರ್ ವೆಲ್,ನವೀಕರಣ, ಪಂಪ್ ಮೋಟರ್,ಹುಳು ತೆಗೆಯುವುದು,ದಾರಿ ದೀಪಾ,ಭವನ ನಿರ್ಮಾಣ, ಗುಡಿ ನಿರ್ವಹಣೆ, ಮಳಿಗೆ ದುರಸ್ತಿ,ಆಟಿಕೆಗಳು, ಗಾರ್ಡನ್,ನೂತನ ನಿವೇಶನದ ನಿರ್ಮಾಣ , ಶೌಚಾಲಯ, ಶಾಲೆ ಅಭಿವೃದ್ಧಿ, ಸಾಂಕ್ರಾಮಿಕ ರೋಗ ನಿರೋಧಕ ಸಿಂಪಡಣೆ, ಸೇರಿದಂತೆ ನೂರಾರು ಕಾಮಗಾರಿಗಳ ಕುರಿತು ವಾದ ವಿವಾದ ಚರ್ಚೆ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ರಷಿಯಾ ಬೇಗಂ, ಉಪಾಧ್ಯಕ್ಷೆ ಸಂತೋಷಿ ಜಯಪ್ರಕಾಶ್, ಸ್ಥಾಯಿ ಸಮಿತಿ ವೆಂಕಟೇಶ ನಾಯಕ, ಅಧಿಕಾರಿ ಗಂಗಾಧರ ವಿರೋಧ ಪಕ್ಷದ ಮಹೇಂದ್ರ ನಾಯಕ, ತನ್ವೀರ್ ಉಲ್ಲ್ ಹಸನ್, ಲಕ್ಷ್ಮಿದೇವಿ ನಾಯಕ, ಸುಖಮುನಿ ಕೆ, ಶರಣಪ್ಪ ಮೇದಾ, ಫರೀದ್ ಉಮರಿ,ಸೇರಿದಂತೆ ಎಲ್ಲ ಸದಸ್ಯರು, ನಾಮ ನಿರ್ದೇಶನ ಸದಸ್ಯರು ಅಡಳಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.