ಸಾಮಾನ್ಯ ವೀಕ್ಷಕರ ನೇತೃತ್ವದಲ್ಲಿ ಅಭ್ಯರ್ಥಿ ಮತ್ತು ಅಧಿಕಾರಿಗಳ ಸಭೆಎಂ.ಸಿ.ಸಿ. ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ

ಕಲಬುರಗಿ,ಏ.27: ವಿಧಾನಸಭೆ ಚುನಾವಣೆಯ ಮಾದರಿ‌ ನೀತಿ ಸಂಹಿತೆಯನ್ನು ಕ್ಷೇತ್ರದ ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಫಜಲಪೂರ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಸಿ. ಸುದರ್ಶನ ರೆಡ್ಡಿ ಹೇಳಿದರು.

ಗುರುವಾರ ಅಫಜಲಪೂರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು, ಚುನಾವಣಾ ಏಜೆಂಟರ ಹಾಗೂ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.

ಎಲ್ಲೆ‌‌ ಎಂ.ಸಿ.ಸಿ ಉಲ್ಲಂಘನೆ ಕಂಡುಬಂದಲ್ಲಿ ಸಿ-ವಿಜಿಲ್, ಸಹಾಯವಾಣಿ ಸಂಖ್ಯೆ-1950ಕ್ಕೆ ಕರೆ ಮಾಡಿ ಅಥವಾ ಚುನಾವಣಾ ಅಧಿಕಾರಿ, ಸಹಾಯಕ ಚುನಾವಣಾಧಿಕಾರಿಗೆ ಲಿಖಿತವಾಗಿ ದೂರು ದಾಖಲಿಸಬೇಕು ಎಂದು ಕರೆ ನೀಡಿದರು.

ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 265 ಮತ್ತು 33 ವಿಶೇಷಚೇತನ ಮತದಾರರನ್ನು ಗುರುತಿಸಿದ್ದು, ಅವರು ಮನೆಯಿಂದಲೆ‌ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳಾ ಸಖಿ ಮತಗಟ್ಟೆ, ಕ್ರಿಟಿಕಲ್ ಮತಗಟ್ಟೆ ಹಾಗೂ ಇನ್ನೀತರ ಚುನಾವಣಾ ವಿಷಯಗಳ ಕುರಿತು ಸಾಮಾನ್ಯ ವೀಕ್ಷಕರು ಮಾಹಿತಿ ನೀಡಿದರು.

ಸಭೆಯಲ್ಲಿ ಚುನಾವಣಾಧಿಕಾರಿ ಮಹಿಮೂದ, ಸಹಾಯಕ ಚುನಾವಣಾಧಿಕಾರಿ ಸಂಜೀವಕುಮಾರ, ವೀಕ್ಷಕರ ಲೈಜನಿಂಗ್ ಅಧಿಕಾರಿ ಸೋಮಶೇಖರ, ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.